ಕುಂದಾಪುರ: ತಂದೆಯ ಕೊಲೆಗೆ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಸುಪಾರಿ ನೀಡಿದ್ದಾರಾ? ಹೀಗಂತ ಅವರ ತಂದೆ ಬಾಲಕೃಷ್ಣ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀಕಾಂತ್ ಕಶ್ಯಪ್ ಜೊತೆ ಚೈತ್ರಾ ಕುಂದಾಪುರ ಮದುವೆಯಾದಾಗಿನಿಂದ ತಂದೆ ಮತ್ತು ಮಗಳ ನಡುವೆ ವಾಗ್ವಾದ ಮಿತಿ ಮೀರಿದೆ. ಮನೆ ಜಗಳ ಬೀದಿಗೆ ಬಂದಿತ್ತು. ಶ್ರೀಕಾಂತ್ ಮತ್ತು ಚೈತ್ರಾ ಇಬ್ಬರೂ ವಂಚಕರು, ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ, ನನ್ನನ್ನೇ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಬಾಲಕೃಷ್ಣ ಪೂಜಾರಿ ಆರೋಪಿಸಿದ್ದರು.
ಇದಕ್ಕೆ ಚೈತ್ರಾ ಕುಂದಾಪುರ ಕೂಡಾ ತಿರುಗೇಟು ನೀಡಿದ್ದರು. ಇದೀಗ ಬಾಲಕೃಷ್ಣ ಪೂಜಾರಿ ತಮ್ಮ ಮಗಳೇ ನನ್ನ ಕೊಲೆಗೆ ಸುಪಾರಿ ನೀಡಿದ್ದಾಳೆ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಮದುವೆಗೆ ನನ್ನ ಕರೆದಿರಲಿಲ್ಲ. ಹಾಗಿದ್ದರೂ ಮದುವೆಗೆ ಬರದೇ ಇದ್ದರೆ ಭೂಗತ ದೊರೆಗಳ ಮೂಲಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಈಗ ನಾನು ಸತ್ತು ಹೋಗಿದ್ದೇನೆ ಎಂದು ಊರೆಲ್ಲಾ ಹೇಳಿಕೊಂಡು ತಿರುಗಾಡುತ್ತಿದ್ದಾಳೆ ಎಂದು ದೂರು ನೀಡಿದ್ದಾರೆ. ಇದು ಯಾವ ಹಂತಕ್ಕೆ ಬಂದು ತಲುಪುತ್ತದೋ ನೋಡಬೇಕಿದೆ.