Darshan: ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ವಿರುದ್ಧ ದೂರು: ಫಾರಂಹೌಸ್ ಮೇಲೆ ರೇಡ್
ನಟ ದರ್ಶನ್ ಮಾಲಿಕತ್ವದ ಟಿ ನರಸೀಪುರದಲ್ಲಿರುವ ಫಾರಂ ಹೌಸ್ ನಲ್ಲಿ ಅಪರೂಪದ ತಳಿಯ ಬಾತುಕೋಳಿಯೊಂದನ್ನು ಸಾಕಿದ್ದಾರೆ. ಇದನ್ನು ಖಾಸಗಿಯಾಗಿ ಸಾಕುವುದು ಅಪರಾಧವಾಗಿದೆ. ಆದರೆ ಯೂ ಟ್ಯೂಬ್ ಸಂದರ್ಶನವೊಂದರ ವೇಳೆ ದರ್ಶನ್ ಈ ಬಾತುಕೋಳಿ ಬಗ್ಗೆ ವಿವರಣೆ ನೀಡಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ.
ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಫಾರಂ ಹೌಸ್ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಈ ಬಾತುಕೋಳಿಗಳನ್ನು ನಮ್ಮ ಸ್ನೇಹಿತರೊಬ್ಬರು ನೀಡಿದ್ದರು ಎಂದು ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ದೂರು ಸಲ್ಲಿಸಿದ್ದಾರೆ.
ಹೀಗಾಗಿ ಈಗ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಜಾಗ ವಿಜಯಲಕ್ಷ್ಮಿ ಮಾಲಿಕತ್ವದಲ್ಲಿರುವ ಕಾರಣ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.