ರಜನೀಕಾಂತ್ 2.0 ಸಿನಿಮಾ ಲೀಕ್; ಪೊಲೀಸ್ ಆಯುಕ್ತರಿಗೆ ದೂರು ನೀಡಿದ ರಜನೀಕಾಂತ್ ಅಭಿಮಾನಿಗಳ ಸಂಘ
ಮಂಗಳವಾರ, 4 ಡಿಸೆಂಬರ್ 2018 (07:19 IST)
ಚೆನ್ನೈ : ರಜನೀಕಾಂತ್ ಅಭಿನಯದ 2.0 ಸಿನಿಮಾವನ್ನು ಕೆಲವು ಕಿಡಿಗೇಡಿಗಳು ರೆಕಾರ್ಡ್ ಮಾಡಿ ವೈರಲ್ ಮಾಡಿದ ಹಿನ್ನಲೆಯಲ್ಲಿ ಇದೀಗ ಕರ್ನಾಟಕ ರಾಜ್ಯ ರಜನೀಕಾಂತ್ ಅಭಿಮಾನಿಗಳ ಸಂಘದವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ರಜನೀಕಾಂತ್ ಅಭಿನಯದ 2.0 ಸಿನಿಮಾ ನವೆಂಬರ್ 29 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಥಿಯೇಟರ್ ನಲ್ಲಿ ಸಿನಿಮಾವನ್ನು ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡಿದ್ದಾರೆ.
ಈ ಹಿನ್ನೆಲೆ ಸೋಮವಾರ ಕರ್ನಾಟಕ ರಾಜ್ಯ ರಜನೀಕಾಂತ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ರಜಿನಿ ಸಂತೋಷ್ ಅವರು,'ಇಷ್ಟು ಬೇಗ ಚಿತ್ರವನ್ನು ಹ್ಯಾಕರ್ಸ್ ವೈರಲ್ ಮಾಡಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ' ಪೊಲೀಸ್ ಆಯುಕ್ತರಿಗೆ ದೂರು ನೀಡುವುದರ ಮೂಲಕ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.