ರಾಯಿಸ್,ಕಬೀಲ್ ಚಿತ್ರ ಒಂದೇ ದಿನ ರಿಲೀಸ್ ,ರಾಕೇಶ್ ರೋಷನ್ ಅಸಮಾಧಾನ!

ಗುರುವಾರ, 5 ಮೇ 2016 (12:20 IST)
ಹೃತಿಕ್ ರೋಷನ್ ಅಭಿನಯದ ಕಬಿಲ್ ಚಿತ್ರ ಹಾಗೂ ಶಾರೂಖ್ ಅಭಿನಯದ ರಾಯಿಸ್ ಚಿತ್ರ ಒಂದೇ ದಿನ ರಿಲೀಸ್ ಆಗ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಯಿಸ್ ಹಾಗೂ ಕಬಿಲ್ ಚಿತ್ರವು ಒಂದೇ ದಿನ ರಿಲೀಸ್ ಆಗುತ್ತಿರುವುದರಿಂದ ರಾಕೇಶ್ ರೋಶನ್ ಅಸಮಾಧಾನದಲ್ಲಿದ್ದಾರೆ ಎಂದು ಹೇಳಲಾಗ್ತಿದೆ.. 
ಇನ್ನೂ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಹಾಗೂ ರಾಯಿಸ್ ಚಿತ್ರವು ಒಂದೇ ದಿನ ರಿಲೀಸ್ ಆಗುತ್ತೆ ಎಂದು ಹೇಳಲಾಗ್ತಿತ್ತು. ಆದರೆ ರಾಯಿಸ್ ಚಿತ್ರ ಜನೆವರಿ 26, 2017ರಂದು ರಿಲೀಸ್ ಆಗಲಿದೆ. ಅದೇ ದಿನ ಕಬಿಲ್ ಬಿಗ್ ಸ್ಕ್ರೀನ್ ಮೇಲೆ ಬರಲಿದೆ. 
 
ಇನ್ನೂ ಕಬಿಲ್ 'ಚಿತ್ರದಲ್ಲಿ ಹೃತಿಕ್ ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರೋ ಹೃತಿಕ್ ರೋಷನ್. ಕಬಿಲ್ ಚಿತ್ರದಲ್ಲಿ ಹೃತಿಕ್ ಅಂಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳಿಗಳು ಖುಷಿ ಆಗಿದ್ದಂತೂ ಸುಳ್ಳಲ್ಲ. 
 
ನ್ನೂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ