ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಇಬ್ಬರು ಪ್ರೀತಿಸುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಇದೀಗ ಹೊಸ ವಿಚಾರವೆನೆಂದರೆ ಇವರ ಪ್ರೀತಿಗೆ ಮನೆಯವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸದ್ಯದಲ್ಲೇ ಈ ಜೋಡಿ ಮದುವೆಯಾಗುತ್ತಾರಂತೆ.
ಹೌದು. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಂದಿನ ವರ್ಷ ಮದುವೆಯಾಗ್ತಾರೆ ಎಂದು ಕಪೂರ್ ಕುಟುಂಬದ ಆಪ್ತ ಸ್ನೇಹಿತರೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ರಣಬೀರ್ ಈ ಹಿಂದೆ ಪ್ರೀತಿಸಿದ್ದ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಹಾಗೂ ತಾಯಿ ನೀತು ಅವರಿಗೆ ಅಷ್ಟು ಇಷ್ಟವಾಗಿರಲಿಲ್ಲವಂತೆ. ಆದರೆ ಆಲಿಯಾ ಇಷ್ಟವಾಗಿದ್ದಾರಂತೆ. ಹಾಗಾಗಿ ಇಬ್ಬರ ಮದುವೆಗೆ ಕುಟುಂಬಸ್ಥರು ಯೋಚನೆ ಮಾಡ್ತಿದ್ದಾರಂತೆ.
ರಣಬೀರ್ ಮದುವೆ ಬಗ್ಗೆ ಪತ್ರಿಕ್ರಿಯೆ ನೀಡಿದ ರಿಷಿ ಕಪೂರ್, ಮಗನಿಗೆ ಇದು ಮದುವೆಯಾಗಲು ಸರಿಯಾದ ವಯಸ್ಸು ಎಂದಿದ್ದಾರೆ. 27ನೇ ವರ್ಷದಲ್ಲಿಯೇ ನಾನು ಮದುವೆಯಾಗಿದ್ದೆ. ಮಗನಿಗೆ ಈಗ 35 ವರ್ಷ. ಈಗ ಆತ ಮದುವೆಯಾಗುವುದು ಬೆಸ್ಟ್. ಆತನಿಗೆ ಇಷ್ಟವಾಗುವ ಹುಡುಗಿ ಜೊತೆ ಮದುವೆಯಾಗಬಹುದೆಂದು ರಿಷಿ ಕಪೂರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ