ಹೀನಾಖಾನ್ ಗಣೇಶನ ಮೂರ್ತಿ ಬಳಿ ನಿಂತು ತೆಗೆದ ಫೋಟೋ ಟ್ರೋಲ್ ಆಗಿದ್ಯಾಕೆ?

ಬುಧವಾರ, 15 ಆಗಸ್ಟ್ 2018 (12:03 IST)
ಮುಂಬೈ : ಕಿರುತೆರೆ ನಟಿ ಹಾಗು ಬಿಗ್​ಬಾಸ್​ ಮಾಜಿ ಸ್ಪರ್ಧಿ ಹೀನಾಖಾನ್​ ಗಣೇಶನ ಮೂರ್ತಿ ಬಳಿ ನಿಂತು ತೆಗೆದ ಫೋಟೋವೊಂದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಟೀಕೆ ವ್ಯಕ್ತವಾಗುತ್ತಿದೆ.


ಹೌದು. ಹೀನಾ ಖಾನ್  ತನ್ನ ಬಾಯ್​ ಫ್ರೆಂಡ್​ ರಾಕಿ ಜೈಸ್ವಾಲ್​ ಜತೆ ನಾಸಿಕ್​​ಗೆ ತೆರಳಿದ್ದರು. ಅಲ್ಲಿ ತೆಗೆದ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಆದರೆ, ಅದರಲ್ಲೊಂದು ಫೋಟೋದಲ್ಲಿ ಹೀನಾ ಶೂ ಧರಿಸಿ ಗಣೇಶ್​ ಮೂರ್ತಿಯ ಬಳಿ ನಿಂತು ಫೋಟೋ ಕ್ಲಿಕ್ಕಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ನೆಟ್ಟಿಗರು ಆಕೆಯ ಮೇಲೆ ಗರಂ ಆಗಿದ್ದಾರೆ.


ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಹೀನಾಖಾನ್ ಅದೇನು ದೇವಸ್ಥಾನ ಅಲ್ಲ, ಎಲ್ಲಾ ಜನರು ಓಡಾಡುವ ಜಾಗ, ಅಲ್ಲಿ ಚಪ್ಪಲ್ ಹಾಕಿಯೇ ಓಡಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ