ಹೊಸ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದಾರಾ ಅಮೀರ್ ಖಾನ್?

ಸೋಮವಾರ, 13 ಆಗಸ್ಟ್ 2018 (10:40 IST)
ಮುಂಬೈ: ಬಾಲಿವುಡ್ ಮಿ. ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ರಜನೀಕಾಂತ್, ಕಮಲ್ ಹಾಸನ್ ರೀತಿಯಲ್ಲಿ ಹೊಸ ಪಕ್ಷ ಕಟ್ಟಲು ಹೊರಟಿದ್ದಾರಾ? ಹೀಗೊಂದು ಸುದ್ದಿ ಬಾಲಿವುಡ್ ವಲಯದಲ್ಲಿ ಓಡಾಡುತ್ತಿತ್ತು.

ಅದಕ್ಕೀಗ ಸ್ವತಃ ಅಮೀರ್ ಖಾನ್ ಸ್ಪಷ್ಟನೆ ಕೊಟ್ಟಿದ್ದಾರೆ. ಒಬ್ಬ ಸೆಲೆಬ್ರಿಟಿಯಾಗಿ ರಾಜ್ಯಸಭೆಗೆ ಪ್ರವೇಶಿಸುವ ಮೂಲಕ ರಾಜಕೀಯ ರಂಗಕ್ಕೆ ಎಂಟ್ರಿ ಕೊಡುತ್ತೀರಾ ಎಂಬ ಪ್ರಶ್ನೆಗಳಿಗೆ ಅಮೀರ್ ಖಾನ್ ಸ್ಪಷ್ಟವಾಗಿ ಉತ್ತರಿಸಿದ್ದಾರೆ.

‘ಸದ್ಯಕ್ಕೆ ನಮ್ಮ ಮೇಲೆ ಸಾಕಷ್ಟು ಜವಾಬ್ಧಾರಿಯಿವೆ. ಆ ಜವಾಬ್ಧಾರಿಯುತ ಕೆಲಸ ಮಾಡಲು ರಾಜಕೀಯದ ಅಗತ್ಯವಿಲ್ಲ’ ಎನ್ನುವ ಮೂಲಕ ಅಮೀರ್ ಸದ್ಯಕ್ಕೆ ತಮಗೆ ರಾಜಕೀಯ ಪ್ರವೇಶಿಸುವ ಇರಾದೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ