ರಣಬೀರ್ ಕಪೂರ್-ಅಲಿಯಾ ಮಗಳಿಗಿದೆ ಈ ಖ್ಯಾತ ನಟಿಯ ಹೋಲಿಕೆ!
ಕ್ರಿಸ್ ಮಸ್ ಸಂದರ್ಭದಲ್ಲಿ ರಣಬೀರ್ ದಂಪತಿ ಮಗಳ ಜೊತೆಗೆ ಇದೇ ಮೊದಲ ಬಾರಿಗೆ ಫೋಟೋಗ್ರಾಫರ್ ಗಳ ಮುಂದೆ ಪೋಸ್ ನೀಡಿದ್ದಾರೆ. ಮುದ್ದು ರಾಹಾ ಕೂಡಾ ಕ್ಯಾಮರಾಗೆ ಮುದ್ದಾಗಿಯೇ ಪೋಸ್ ನೀಡಿದ್ದಾಳೆ.
ಕ್ರಿಸ್ ಮಸ್ ನಿಮಿತ್ತ ರಣಬೀರ್ ದಂಪತಿ ಜುಹೂವಿನ ಬಂಗಲೆಯಲ್ಲಿ ಔತಣಕೂಟ ಏರ್ಪಡಿಸಿದ್ಷರು. ಈ ವೇಳೆ ಫೋಟೋಗ್ರಾಫರ್ ಗಳ ಮುಂದೆ ಪೋಸ್ ನೀಡಿದ್ದಾರೆ. ರಣಬೀರ್ ಮಗಳು ರಾಹಾ ನೋಡಿದ ನೆಟ್ಟಿಗರು ಈಕೆಗೆ ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಹೋಲಿಕೆಯಿದೆ ಎಂದಿದ್ದಾರೆ.
ಕಪೂರ್ ಕುಟುಂಬದ ಕರೀನಾ ಕೂಡಾ ಚಿಕ್ಕವರಿದ್ದಾಗ ರಾಹಾಳನ್ನೇ ಹೋಲುತ್ತಿದ್ದಳು. ಕರೀನಾ ಕೂಡಾ ಚಿಕ್ಕವರಿದ್ದಾಗ ಬೆಕ್ಕಿನಗಣ್ಣಿನ ಮುದ್ದು ಬೊಂಬೆಯಂತಿದ್ದರು. ರಾಹಾ ಕೂಡಾ ಅವರನ್ನೇ ಹೋಲುತ್ತಿದ್ದಾರೆ. ವಿಶೇಷವೆಂದರೆ ರಣಬೀರ್ ತಂದೆ ರಿಷಿ ಕಪೂರ್ ಕೂಡಾ ನೀಲಿ ಕಣ್ಣು ಹೊಂದಿದ್ದರು. ಇದೀಗ ರಾಹಾಗೂ ತಾತನದ್ದೇ ಹೋಲಿಕೆ ಬಂದಿದೆ.