ಬೆಂಗಳೂರು: ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಇದೀಗ ಏಳು ದಿನಗಳನ್ನು ಪೂರೈಸಿರುವ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?
ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ಸರಿಯಾಗಿ 7 ದಿನ ಪೂರ್ತಿಯಾಗಿದೆ. ಮೊದಲ ದಿನವಾಗ ಸಿನಿಮಾ ಅರ್ಧಶತಕ ಕೋಟಿ ದಾಟಿತ್ತು. ಮೂರೇ ದಿನದಲ್ಲಿ 200 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ ಸಿನಿಮಾ ವಾರಕ್ಕೆ ಕಾಲಿಟ್ಟಿದೆ.
ಈಗಲೂ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂಜೆ ಮತ್ತು ಬೆಳಗಿನ ಶೋಗಳು ಹೆಚ್ಚು ಕಡಿಮೆ ಹೌಸ್ ಫುಲ್ ಆಗುತ್ತಿವೆ. ಆದರೆ ವಾರದ ದಿನವಾಗಿರುವುದರಿಂದ ಮಧ್ಯಾಹ್ನದ ಶೋಗಳಿಗೆ ಅಷ್ಟೊಂದು ಬೇಡಿಕೆಯಿಲ್ಲ. ಹೀಗಾಗಿ ಕಳೆದ ಎರಡು ದಿನಗಳಿಂದ ಕಲೆಕ್ಷನ್ ಕೊಂಚ ಡಲ್ ಹೊಡೆದಿದೆ.
ಆದರೆ ವಾರಂತ್ಯಕ್ಕೆ ಮತ್ತೆ ಪಿಕ್ ಅಪ್ ಆಗುವುದು ಖಚಿತವಾಗಿದೆ. ಇಂದಿನ ದಿನದವರೆಗೆ ನೋಡಿದರೆ ಕಾಂತಾರ ಚಾಪ್ಟರ್ 1 ಕಲೆಕ್ಷನ್ 300 ಕೋಟಿ ರೂ. ದಾಟಿದೆ. ನಿನ್ನೆ ಒಂದೇ ದಿನ ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ ಸೇರಿ 25 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಾರಂತ್ಯದ ದಿನಗಳಲ್ಲಿ 50 ಪ್ಲಸ್ ಕೋಟಿ ಕಲೆಕ್ಷನ್ ಮಾಡುತ್ತಿದ್ದ ಕಾಂತಾರ ಚಾಪ್ಟರ್ 1 ವಾರದ ದಿನಗಳಲ್ಲಿ 30 ಕೋಟಿಯೊಳಗೆ ಕಲೆಕ್ಷನ್ ಮಾಡುತ್ತಿದೆ. ವಾರಂತ್ಯದಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆಯಿದೆ.