ಗರ್ಭಿಣಿ ಪತ್ನಿಯ ಕರೆತರಲು ಲಂಡನ್ ಗೆ ತೆರಳಲಿರುವ ರಣಬೀರ್ ಕಪೂರ್

ಮಂಗಳವಾರ, 28 ಜೂನ್ 2022 (11:53 IST)
ಮುಂಬೈ: ಪತ್ನಿ ಅಲಿಯಾ ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಣಬೀರ್ ಕಪೂರ್ ಈಗ ಲಂಡನ್ ಗೆ ತೆರಳಲಿದ್ದಾರೆ.

ಅಲಿಯಾ ಈಗ ಲಂಡನ್ ನಲ್ಲಿ ತಮ್ಮ ಮೊದಲ ಹಾಲಿವುಡ್ ಸಿನಿಮಾ ಶೂಟಿಂಗ್ ನಲ್ಲಿದ್ದಾರೆ. ಹೀಗಾಗಿ ಅಲಿಯಾರನ್ನು ಸೇಫ್ ಆಗಿ ಮನೆಗೆ ಕರೆತರಲು ಸ್ವತಃ ರಣಬೀರ್ ಲಂಡನ್ ಗೆ ತೆರಳಲಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಸದ್ಯದಲ್ಲೇ ರಣಬೀರ್ ತಮ್ಮ ಮಗುವಿನ ಹೆಸರನ್ನು ಟ್ಯಾಟೂ ಆಗಿ ಹಾಕಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೆ. ಅಂತೂ ರಣಬೀರ್ ಮನೆಯಲ್ಲಿ ಈಗ ಸಂಭ್ರಮ ಮೇರೆ ಮೀರಿದೆ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ