ಯೋಗ ದಿನಾಚರಣೆ ಆಚರಿಸಿದ ಸೆಲೆಬ್ರಿಟಿಗಳು

ಮಂಗಳವಾರ, 21 ಜೂನ್ 2022 (16:29 IST)
ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಾದ ಇಂದು ಸ್ಯಾಂಡಲ್ ವುಡ್, ಬಾಲಿವುಡ್, ಕ್ರೀಡಾ ಲೋಕದ ತಾರೆಯರು ಯೋಗ ಮಾಡಿ ಗಮನ ಸೆಳೆದಿದ್ದಾರೆ.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಈವರೆಗಿನ ಯೋಗದ ವಿವಿಧ ಭಂಗಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಯೋಗ ದಿನಕ್ಕೆ ಶುಭ ಕೋರಿದ್ದಾರೆ. ಇನ್ನು, ಕ್ರಿಕೆಟಿಗ ಶಿಖರ್ ಧವನ್, ಸುರೇಶ್ ರೈನಾ, ಯುವರಾಜ್ ಸಿಂಗ್, ಪಿ.ವಿ. ಸಿಂಧು ಮುಂತಾದ ಕ್ರೀಡಾಳುಗಳು ಯೋಗ ದಿನದಂದು ಯೋಗ ಮಾಡಿ ಗಮನ ಸೆಳೆದಿದ್ದಾರೆ.

ಬಾಲಿವುಡ್ ತಾರೆಯರ ಪೈಕಿ ಮಲೈಕಾ ಅರೋರಾ, ಕರೀಶ್ಮಾ ಕಪೂರ್, ಅನಿಲ್ ಕಪೂರ್ ಇತ್ಯಾದಿ ತಾರೆಯರು ತಮ್ಮ ಯೋಗದ ಭಂಗಿಗಳನ್ನು ಪ್ರಕಟಿಸುವ ಮೂಲಕ ಶುಭ ಕೋರಿದ್ದಾರೆ.

ಸ್ಯಾಂಡಲ್ ವುಡ್ ತಾರೆಯರ ಪೈಕಿ ಪ್ರಿಯಾಂಕ ಉಪೇಂದ್ರ, ನವರಸನಾಯಕ ಜಗ್ಗೇಶ್ ಯೋಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೆ, ವಸಿಷ್ಠ ಸಿಂಹ, ಧ್ರುವ ಸರ್ಜಾ, ಡಾರ್ಲಿಂಗ್ ಕೃಷ್ಣ ಮುಂತಾದ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಯೋಗ ದಿನಾಚರಣೆಗೆ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ