ಐಪಿಎಲ್ ವೇದಿಕೆಯಲ್ಲಿ ಕೆಜಿಎಫ್ 2 ಹಾಡಿಗೆ ಹೆಜ್ಜೆ ಹಾಕಿದ ರಣವೀರ್ ಸಿಂಗ್

ಸೋಮವಾರ, 30 ಮೇ 2022 (09:48 IST)
ಅಹಮ್ಮದಾಬಾದ್: ಐಪಿಎಲ್ 2022 ರ ಫೈನಲ್ ವೇಳೆ ನಡೆದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ನೃತ್ಯದ ಮೂಲಕ ಮನರಂಜನೆ ಒದಗಿಸಿದ್ದರು.

 
ಈ ವೇಳೆ ಅವರು ಕೆಜಿಎಫ್ 2 ಸಿನಿಮಾದ ಡೈಲಾಗ್ ಹೇಳಿದ್ದಲ್ಲದೆ, ಹಾಡಿಗೆ ನೃತ್ಯ ಮಾಡಿ ನೆರೆದವರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಒಟ್ಟಾರೆ 15 ನಿಮಿಷಗಳ ಕಾರ್ಯಕ್ರಮ ನೀಡಿದ ರಣವೀರ್ ಸಿಂಗ್ ಈ ವೇಳೆ ಕೆಜಿಎಫ್ ಸಿನಿಮಾದ ‘ಧೀರ ಧೀರ’ ಹಾಡಿಗೆ ಹೆಜ್ಜೆ ಹಾಕಿದರು. ಅಲ್ಲದೆ, ಕೆಜಿಎಫ್ 2 ನ ರಾಕಿ ಭಾಯಿಯ ಫೇಮಸ್ ಡೈಲಾಗ್ ‘ವಯಲೆನ್ಸ್ ವಯಲೆನ್ಸ್’ ಡೈಲಾಗ್ ನ್ನೂ ಹೇಳಿ ರಂಜಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ