ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಲು ದುಬಾರಿ ಚಾರ್ಜ್ ಮಾಡಿದ್ದಾರಂತೆ ರಶ್ಮಿಕಾ ಮಂದಣ್ಣ

Krishnaveni K

ಗುರುವಾರ, 16 ಮೇ 2024 (12:07 IST)
ಮುಂಬೈ: ಬಾಲಿವುಡ್ ನ ಸಿಕಂದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿರುವ ರಶ್ಮಿಕಾ ಮಂದಣ್ಣ ಸಿನಿಮಾಗಾಗಿ ದುಬಾರಿ ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ. ಅವರ ಸಂಭಾವನೆ ವಿವರ ಈಗ ಬಹಿರಂಗವಾಗಿದೆ.

ಸಿಕಂದರ್ ಸಿನಿಮಾ ಮುಂದಿನ ವರ್ಷ ಈದ್ ಹಬ್ಬದ ವೇಳೆ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೇ ಚಿತ್ರತಂಡ ರಶ್ಮಿಕಾ ಚಿತ್ರದ ನಾಯಕಿ ಎಂದು ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ ಟಾಲಿವುಡ್ ನಟಿ ತ್ರಿಶಾ ಕೃಷ್ಣನ್ ಕೂಡಾ ಪ್ರಮುಖ ಪಾತ್ರ ಮಾಡಲಿರುವ ಸುದ್ದಿ ಕೇಳಿಬಂದಿತ್ತು. ಈ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ತಮಿಳು ನಿರ್ದೇಶಕ ಎ.ಆರ್. ಮುರುಗದಾಸ್.

ಈ ಸಿನಿಮಾದಲ್ಲಿ ನಟಿಸಲು ರಶ್ಮಿಕಾ 4 ಕೋಟಿ ರೂ. ಸಂಭಾವನೆ ಜೇಬಿಗಿಳಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಮೊದಲು ಅನಿಮಲ್ ಸಿನಿಮಾಗೂ ರಶ್ಮಿಕಾ ಇಷ್ಟೇ ಚಾರ್ಜ್ ಮಾಡಿದ್ದರು. ಇದೀಗ ಸಲ್ಮಾನ್ ಸಿನಿಮಾಗೂ 4 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕಾ ಕೂಡಾ ಒಬ್ಬರು.

ಈಗ ರಶ್ಮಿಕಾ ಮತ್ತೊಮ್ಮೆ ಬಾಲಿವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಅನಿಮಲ್ ಸಿನಿಮಾ ಬಳಿಕ ಬಾಲಿವುಡ್ ನಲ್ಲಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಸಿನಿಮಾ ಮೂಲಕ ರಶ್ಮಿಕಾ ಬೇಡಿಕೆ ಹೆಚ್ಚಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಸೌತ್ ಸ್ಟಾರ್ ನಟರಿಗೆ ನಾಯಕರಿಗೆ ಜೋಡಿಯಾಗಿದ್ದ ರಶ್ಮಿಕಾ ಈಗ ಬಾಲಿವುಡ್ ನಟರ ಜೊತೆ ನಟಿಸುವ ಅವಕಾಶ ಪಡೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ