ಬೆಂಗಳೂರು: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಮೇಲೆ ಆಟದಲ್ಲಿ ಹೊಸ ಹವಾ ಶುರುವಾಗಿದ್ದು, ಇದೀಗ ಆರಂಭದಿಂದಲೂ ಹವಾ ಸೃಷ್ಟಿ ಮಾಡಿದ್ದ ಅಶ್ವಿನಿ ಗೌಡ ಇದೀಗ ಜೈಲು ಸೇರಿದ್ದಾರೆ.
ಜೈಲು ಸೇರಿದ ಅಶ್ವಿನಿ ಗೌಡ ಆಟ ನೋಡಿ, ಸಹ ಸ್ಪರ್ಧಿಗಳು ದಂಗಾಗಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಯ್ಕೆ ಅನುಸಾರ ಈ ವಾರದ ಆಟದಿಂದ ಹೊರಗುಳಿದಿದ್ದ, ಅನಿಶ್ವಿಗೆ ಕಳಪೆ ಪ್ರದರ್ಶನವನ್ನು ನೀಡಲಾಗಿದೆ. ಇದರ ಅನುಸಾರ ಅಶ್ವಿನಿ ಜೈಲು ಸೇರಿದ್ದಾರೆ.
ಇನ್ನೂ ಕಳಪೆ ಪ್ರದರ್ಶನ ಡ್ರೆಸ್ ಧರಿಸಿ, ಜೈಲು ಒಳಗೆ ಕಾಲಿಡುವಾಗ ಒಳಗಡೆನೂ ಹುಲಿನೇ, ಬೋನ್ ಅಲ್ಲಿಂದ್ರು ಹುಲಿನೇ ಎಂದು ಗರಂ ಆಗಿದ್ದಾರೆ. ಅದಲ್ಲದೆ ಜೈಲಿನಿಂದ ಹೊರಬರಲು ಯತ್ನಿಸಿದ್ದು, ಈ ವೇಳೆ ತಡೆಯಲು ಬಂದ ರಘು ಮೇಲೆ ಕೋಪಗೊಂಡಿದ್ದಾರೆ.
ಇನ್ನೂ ಮನೆಮಂದಿಯ ಊಟಕ್ಕೆ ತರಕಾರಿ ಕಟ್ ಮಾಡಿಕೊಡಲು ಒಪ್ಪದ ಅಶ್ವಿನಿ ಮನಸ್ಸಾದಾಗ ಮಾಡಿಕೊಡುತ್ತೇನೆ ಎಂದಿದ್ದಾರೆ.