ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

Sampriya

ಶುಕ್ರವಾರ, 24 ಅಕ್ಟೋಬರ್ 2025 (20:18 IST)
Photo Credit X
ಹಿಟ್ ಆ್ಯಂಡ್ ರನ್ ಸಂಬಂಧ ದೂರು ದಾಖಲಾಗುತ್ತಿದ್ದ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.  ಆರೋಪಕ್ಕೆ ವೀಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಅಪಘಾತಕ್ಕೆ ಪ್ರತಿಕ್ರಿಯೆಯಾಗಿ ವೀಡಿಯೋವೊಂದನ್ನು ದಿವ್ಯಾ ಸುರೇಶ್ ಹಂಚಿಕೊಂಡಿದ್ದಾರೆ.‌ ಕಾನೂನು ಮುಂದೇ ಎಲ್ಲರೂ ಸಮಾನರಾಗಿದ್ದು, ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. 
ತಪ್ಪು ಯಾರೇ ಮಾಡಿರಲಿ, ಹೇಗೆ ಮಾಡಿರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ಆಗೇ ಆಗುತ್ತೆ ಎಂದು ತಿಳಿಸಿದ್ದಾರೆ. 


ಅ.4ರ ರಾತ್ರಿ 1:30ಕ್ಕೆ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅ.7 ರಂದು ಗಾಯಗೊಂಡ ಮಹಿಳೆಯ ಸಂಬಂಧಿ ಕಿರಣ್ ನಟಿ ವಿರುದ್ಧ ದೂರು ದಾಖಲಿಸಿದ್ದರು.

ಕಾರು ಡಿಕ್ಕಿ ಹೊಡೆದು ಗಾಯವಾಗಿ ಪೆಟ್ಟಾಗಿದ್ದರು ನಟಿ, ಗಾಡಿ ನಿಲ್ಲಿಸದೆ   ದಿವ್ಯಾ ಸುರೇಶ್ ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿರೋದಾಗಿ ಚಿಕಿತ್ಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ