ರಶ್ಮಿಕಾ ಮಂದಣ್ಣ ಜೊತೆ ರೋಹಿತ್ ಶರ್ಮಾ, ಗಂಗೂಲಿ! ಏನಿದು ಹೊಸ ಸುದ್ದಿ?!

ಶುಕ್ರವಾರ, 2 ಸೆಪ್ಟಂಬರ್ 2022 (08:50 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಜೊತೆ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ.

ರಶ್ಮಿಕಾ, ರೋಹಿತ್ ಮತ್ತು ಗಂಗೂಲಿ ನಿನ್ನೆ ಇದ್ದಕ್ಕಿದ್ದಂತೆ ಮೆಗಾ ಬ್ಲಾಕ್ ಬ್ಲಸ್ಟರ್ ಎಂಬ ಪ್ರಾಜೆಕ್ಟ್ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 4 ಕ್ಕೆ ಟ್ರೈಲರ್ ರಿಲೀಸ್ ಎಂದು ಘೋಷಿಸಿದ್ದಾರೆ. ಇದು ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂತಾಗಿದೆ.

ಈ ಮೂವರೂ ಸೇರಿಕೊಂಡು ಮಾಡುತ್ತಿರುವುದು ಸಿನಿಮಾವಾ? ಇಲ್ಲವೇ ಬೇರೆ ಏನಾದರೂ ಕಾರ್ಯಕ್ರಮವಾ ಎಂದು ತಿಳಿಯಲು ಸೆಪ್ಟೆಂಬರ್ 4 ರವರೆಗೆ ಕಾಯಬೇಕು.  ಈ ಮೂವರು ಮಾತ್ರವಲ್ಲದೆ, ಕಪಿಲ್ ಶರ್ಮಾ, ತ್ರಿಶಾ ಕೃಷ್ಣನ್, ಕಾರ್ತಿ ಮುಂತಾದವರೂ ಇದೇ ರೀತಿಯ ಪೋಸ್ಟರ್ ಹಂಚಿಕೊಂಡಿದ್ದಾರೆ. ಹೀಗಾಗಿ ಈ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ