ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

Krishnaveni K

ಸೋಮವಾರ, 1 ಸೆಪ್ಟಂಬರ್ 2025 (15:06 IST)
Photo Credit: X
ಬೆಂಗಳೂರು: ತಮ್ಮ ಹುಟ್ಟುಹಬ್ಬದ ಮುನ್ನಾದಿನ ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿ ನಡೆಸಿದ್ದು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಾರದ್ದೇ ಸಿನಿಮಾ ಬಂದರೂ ತಮ್ಮ ಮುಂದಿನ ಸಿನಿಮಾ ಕ್ರಿಸ್ ಮಸ್ ಗೇ ಬರಲಿದೆ ಎಂದಿದ್ದಾರೆ.

ನಾಳೆ ಕಿಚ್ಚ ಸುದೀಪ್ ಹುಟ್ಟುಹಬ್ಬವಿದೆ. ಇಂದು ರಾತ್ರಿ ಸುದೀಪ್ ತಮ್ಮ ಅಭಿಮಾನಿಗಳನ್ನು ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಭೇಟಿ ಮಾಡಲಿದ್ದಾರೆ. ಇದಕ್ಕೆ ಮೊದಲು ಇಂದು ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಕ್ರಿಸ್ ಮಸ್ ಗೆ ಬಿಡುಗಡೆಯಾಗುತ್ತಿರುವುದಾಗಿ ಈಗಾಗಲೇ ಘೋಷಿಸಿದ್ದರು.  ಆದರೆ ಇದೇ ದಿನಕ್ಕೆ ಕನ್ನಡದ 45 ಸೇರಿದಂತೆ ಕೆಲವು ಸ್ಟಾರ್ ನಟರ ಸಿನಿಮಾಗಳೂ ಬಿಡುಗಡೆಗೆ ಸಾಲುಗಟ್ಟಿ ನಿಂತಿದೆ.

ಆದರೆ ಹಾಗಂತ ನಮ್ಮ ಸಿನಿಮಾ ಬಿಡುಗಡೆ ದಿನಾಂಕ ಬದಲಾಯಿಸಲ್ಲ ಎಂದಿದ್ದಾರೆ ಕಿಚ್ಚ. ಯಾರು ಯಾವಾಗ ಬೇಕಾದ್ರೂ ಸಿನಿಮಾ ರಿಲೀಸ್ ಮಾಡಲಿ. ಆದರೆ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರಲಿದೆ ಎಂದಿದ್ದಾರೆ. ಈಗಾಗಲೇ ಸಿನಿಮಾದ ಶೇ.60 ರಷ್ಟು ಚಿತ್ರೀಕರಣ ಪೂರ್ತಿಯಾಗಿದೆ. ಚಿತ್ರೀಕರಣ ನಡೆಯುತ್ತಿದೆ. ನವಂಬರ್ ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯಲಿದೆ ಎಂದಿದ್ದಾರೆ. ಕಿಚ್ಚನ ಈ ಅಪ್ ಡೇಟ್ ಅಭಿಮಾನಿಗಳಿಗೆ ಖುಷಿ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ