Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Sampriya

ಶುಕ್ರವಾರ, 9 ಮೇ 2025 (20:40 IST)
Photo Credit X
ಆರತಿ ಜತೆಗಿನ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಖ್ಯಾತ ನಟ ರವಿ ಮೋಹನ್ ಅವರು ಗಾಯಕಿ ಜತೆ ಕಾಣಿಸಿಕೊಂಡಿದ್ದು ನಟ ಮತ್ತೇ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಚೆನ್ನೈನಲ್ಲಿ ನಡೆದ ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ತಮಿಳು ನಟ ರವಿ ಮೋಹನ್ ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ಜತೆ ಕಾಣಿಸಿಕೊಂಡರು. ರವಿ ಮೋಹನ್ ತನ್ನ ಮಾಜಿ ಪತ್ನಿ ಆರತಿಯೊಂದಿಗೆ ವಿಚ್ಛೇಧನ ಘೋಷಿಸಿದ ತಿಂಗಳ ನಂತರ ಅವರು ಗಾಯಕಿ ಜತೆ ಕಾಣಿಸಿಕೊಂಡಿದ್ದು ವದಂತಿಗೆ ಕಾರಣವಾಗಿದೆ.

ವಿಶೇಷತೆ ಏನೆಂದರೆ ಇವರು ಜೋಡಿಯಾಗಿ ಮದುವೆಗೆ ಹೊಂದುವ ಹಾಗೇ ಬಟ್ಟೆಗಳನ್ನು ಧರಿಸಿದ್ದರು. ನಟ ಸಾಂಪ್ರದಾಯಿಕ ಶರ್ಟ್ ಮತ್ತು ಧೋತಿಯಲ್ಲಿ ಕಾಣಿಸಿಕೊಂಡರೆ, ಕೆನಿಶಾ ಗಡಿಯಲ್ಲಿ ಕಸೂತಿ ಹೊಂದಿರುವ ಗೋಲ್ಡನ್ ಕಲರ್ ಸೀರೆಯನ್ನು ಧರಿಸಿದ್ದರು.

ಪತ್ನಿಗೆ ವಿಚ್ಛೇಧನ ನೀಡುವ ಸುದ್ದಿ ಬೆನ್ನಲ್ಲೇ ಗಾಯಕಿ ಜತೆ ರವಿ ಮೋಹನ್ ಅವರ ಹೆಸರು ತಳುಕು ಹಾಕಿಕೊಂಡಿತು. ಇದೀಗ ಇವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿರುವುದು ಮತ್ತಷ್ಟು ಪುಷ್ಟಿನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ