ಇಷ್ಟಕ್ಕೂ ತೈಮೂರ್ ಅಂದರೆ ಉಕ್ಕಿನ ಮನುಷ್ಯ, ಧೈರ್ಯಶಾಲಿ ರಾಜ ಎಂಬ ಅರ್ಥ ಇದೆಯಂತೆ. ಆದರೆ ನೆಟ್ಟಿಗರು ಕಾಮೆಂಟ್ ಮಾಡುತ್ತಿರುವ ಬಗ್ಗೆ ಕರೀನಾ ಕಪೂರ್ ಚಿಕ್ಕಪ್ಪ ರಿಷಿ ಕಪೂರ್ ಟ್ವಿಟ್ಟರ್ ಮೂಲಕ ಗರಂ ಉತ್ತರ ಕೊಟ್ಟಿದ್ದಾರೆ. ಈ ಹಿಂದೆ ದೇಶವನ್ನು ಆಕ್ರಮಿಸಿದ ವ್ಯಕ್ತಿ ಹೆಸರನ್ನು ಈಗ ಮಗುವಿಗೆ ಹೋಲಿಸುತ್ತಿರುವ ಬಗ್ಗೆ ಅವರು ಅಸಹನೆ ವ್ಯಕ್ತಪಡಿಸಿದ್ದಾರೆ.
”ತಂದೆ ತಾಯಿ ತಮ್ಮ ಮಕ್ಕಳಿಗೆ ಹೆಸರಿಡಬೇಕೆಂದರೆ ಜನ ಯಾಕಿಷ್ಟು ನೋವನುಭವಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಮಕ್ಕಳಿಗೆ ಏನು ಹೆಸರಿಡಬೇಕು ಎಂಬುದು ತಂದೆತಾಯಿ ಇಷ್ಟ" ಎಂದಿದ್ದಾರೆ. ಕಾಮೆಂಟ್ ಮಾಡಕ್ಕೆ ನೀವ್ಯಾರು? ನಿಮ್ಮ ಮಕ್ಕಳ ಹೆಸರನ್ನೇನಾದ್ರೂ ಇಟ್ಟಿದ್ದೀವಾ? ಜಾಸ್ತಿ ಕಾಮೆಂಟ್ ಮಾಡಿದರೆ ಟ್ವಿಟ್ಟರ್‌ನಲ್ಲಿ ಬ್ಲ್ಯಾಕ್ ಆಗೋಗ್ತೀರಾ ಎಂದು ರಿಷಿ ಕಪೂರ್ ಕಿಡಿಕಾರಿದ್ದಾರೆ.