ಕೊನೆಗೂ ಸೋನಂ ಕಪೂರ್ ಮನೆಗೆ ಕನ್ನ ಹಾಕಿದವರು ಅರೆಸ್ಟ್
ಫೆಬ್ರವರಿ 11 ರಂದು ಘಟನೆ ನಡೆದಿತ್ತು. ಈ ಸಂಬಂಧ ಸೋನಂ ಅತ್ತೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರಂತೆ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿತ್ತು.
ಇದೀಗ ಸೋನಂ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಮತ್ತು ಆಕೆಯ ಪತಿ ಸೇರಿಕೊಂಡು ಈ ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.