ಸೋನಂ ಕಪೂರ್ ಮನೆಯಲ್ಲಿ ದರೋಡೆ: ಕೋಟ್ಯಂತರ ನಗ-ನಗದು ಕಳವು

ಶನಿವಾರ, 9 ಏಪ್ರಿಲ್ 2022 (15:52 IST)
ನವದೆಹಲಿ: ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಪತಿ ಆನಂದ್ ಅಹುಜಾ ಅವರ ದೆಹಲಿ ನಿವಾಸದಲ್ಲಿ ದರೋಡೆ ನಡೆದಿದ್ದು ಸುಮಾರು 1 ಕೋಟಿ ರೂ.ಗೂ ಅಧಿಕ ಮೌಲ್ಯದ ನಗ-ನಗದು ದೋಚಲಾಗಿದೆ.

ಈ ಸಂಬಂಧ ಸೋನಂ ಅತ್ತೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಹಣ ಮತ್ತು ಚಿನ್ನಾಭರಣ ಸೇರಿದಂತೆ ಸುಮಾರು 1.41 ಕೋಟಿ ರೂ.ಗಳಷ್ಟು ದೋಚಲಾಗಿದೆ.

ಇದೀಗ ಪೊಲೀಸರು ಆನಂದ್ ಅಹುಜಾ ಮನೆಯ ನೌಕರರು, ಕಾರು ಚಾಲಕರು ಸೇರಿದಂತೆ ಮನೆಗೆ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ‍್ಯಾವಳಿಗಳನ್ನೂ ಪಡೆಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ