ಸೆಕ್ಯುರಿಟಿ ಗಾರ್ಡ್ ಗೆ ಕಪಾಳ ಮೋಕ್ಷ ಮಾಡಿದ ನಟ ಸಲ್ಮಾನ್ ಖಾನ್! ಕಾರಣವೇನು ಗೊತ್ತಾ?

ಶುಕ್ರವಾರ, 7 ಜೂನ್ 2019 (09:25 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಆಗಾಗ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಾರೆ. ಇದೀಗ ಅವರು ತಮ್ಮ ಸೆಕ್ಯುರಿಟಿ ಗಾರ್ಡ್ ಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಅಷ್ಟಕ್ಕೂ ಸಲ್ಮಾನ್ ಆ ಗಾರ್ಡ್ ಗೆ ಕಪಾಳ ಮೋಕ್ಷ ಮಾಡಿದ್ದು ಯಾಕೆ ಗೊತ್ತಾ? ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ತಮ್ಮ ಬಿಗಿ ಭದ್ರತೆಯಲ್ಲಿ ಸಾಗುತ್ತಿದ್ದಾಗ ತಮ್ಮನ್ನು ಒಮ್ಮೆ ಸ್ಪರ್ಶಿಸಲು ಬಂದ ಪುಟಾಣಿ ಅಭಿಮಾನಿಯೊಬ್ಬರ ಜತೆಗೆ ಗಾರ್ಡ್ ಒರಟಾಗಿ ವರ್ತಿಸಿದ್ದು ಸಲ್ಮಾನ್ ಸಿಟ್ಟಿಗೆ ಕಾರಣವಾಗಿದೆ.

ಇದ್ದಕ್ಕಿದ್ದಂತೆ ಗಾರ್ಡ್ ಕಡೆಗೆ ತಿರುಗಿದ ಸಲ್ಮಾನ್ ಅಭಿಮಾನಿಗಳ ಎದುರೇ ಕಪಾಳ ಮೋಕ್ಷ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕೆಲವರು ಈ ವಿಚಾರವಾಗಿ ಸಲ್ಮಾನ್ ರನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಬಹಿರಂಗವಾಗಿ ಈ ರೀತಿ ಕಪಾಳ ಮೋಕ್ಷ ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ