ಮದುವೆಯಲ್ಲಿ ನಂಬಿಕೆಯೇ ಇಲ್ಲ, ಅದು ಓಲ್ಡ್ ಫ್ಯಾಶನ್ ಎಂದ ಸಲ್ಮಾನ್ ಖಾನ್

ಮಂಗಳವಾರ, 4 ಜೂನ್ 2019 (10:48 IST)
ಮುಂಬೈ: ಕೆಲವು ವರ್ಷಗಳಿಂದಲೂ ಕೇಳಿಬರುತ್ತಿರುವ ಪ್ರಶ್ನೆಯೆಂದರೆ ಸಲ್ಮಾನ್ ಖಾನ್ ಮದುವೆ ಯಾವಾಗ? ಈ ಪ್ರಶ್ನೆ ಕೇಳಿ ಕೇಳಿ ಸ್ವತಃ ಸಲ್ಲು ಮಿಯಾಗೂ ಸಾಕಾಗಿರಬೇಕು. ಅದಕ್ಕೇ ಇತ್ತೀಚೆಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಕ್ಕ ಉತ್ತರ ನೀಡಿದ್ದಾರೆ.


ಮದುವೆ ಯಾವಾಗ ಎಂದು ಸಂದರ್ಶಕರು ಕೇಳಿದ್ದಕ್ಕೆ ‘ಮದುವೆಯಲ್ಲಿ ನನಗೆ ನಂಬಿಕೆಯೇ ಇಲ್ಲ. ಅದೀಗ ನಶಿಸಿಹೋಗುತ್ತಿರುವ ಒಂದು ವ್ಯವಸ್ಥೆ. ಆದರೆ ಸಂಗಾತಿ ಎನ್ನುವುದರಲ್ಲಿ ನನಗೆ ನಂಬಿಕೆಯಿದೆ’ ಎಂದಿದ್ದಾರೆ. ಈ ಮೂಲಕ ತಮ್ಮ ಮದುವೆ ಬಗ್ಗೆ ಹಬ್ಬುವ ರೂಮರ್ ಗಳಿಗೆ ಸಲ್ಲು ತಕ್ಕ ಉತ್ತರ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ