ಕತ್ರಿನಾ ಕೈಫ್ ಗೆ ಪ್ರಧಾನಿ ಮೋದಿ ಜತೆ ಡಿನ್ನರ್ ಮಾಡುವ ಆಸೆಯಂತೆ!

ಭಾನುವಾರ, 2 ಜೂನ್ 2019 (09:14 IST)
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಡಿನ್ನರ್ ಡೇಟ್ ಮಾಡುವ ಆಸೆಯಂತೆ!


ಪ್ರಧಾನಿ ಮೋದಿ ಇದೀಗ ಎಷ್ಟಿದೆಯೆಂದರೆ ಅವರೀಗ ಬಾಲಿವುಡ್ ಮಂದಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. ಕಂಗನಾ ರನಾವತ್ ಇತ್ತೀಚೆಗೆ ಪ್ರಧಾನಿ ಮೋದಿಯನ್ನು ಕೊಂಡಾಡಿದ್ದರು. ಇದೀಗ ಕತ್ರಿನಾ ಸರದಿ.

ಸಂದರ್ಶನವೊಂದರಲ್ಲಿ ನೀವು ಯಾರ ಜತೆ ಡಿನ್ನರ್ ಮಾಡಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ ಕತ್ರಿನಾ ಮೂವರ ಹೆಸರು ಹೇಳಿದ್ದು ಇವರಲ್ಲಿ ಪ್ರಧಾನಿ ಮೋದಿ ಹೆಸರೂ ಸೇರಿದೆ. ಮೋದಿ ಹೊರತಾಗಿ ಕತ್ರಿನಾ ಕಂಡೋಲಿಸಾ ರೈಸ್ ಮತ್ತು ಮರ್ಲಿನ್ ಮುನ್ರೋ ಹೆಸರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ