ಐಶ್ವರ್ಯಾ ಆಪ್ತೆಯನ್ನು ಕಾಪಾಡಿದ್ದಕ್ಕೆ ಶಾರುಖ್ ಖಾನ್ರನ್ನು ಹೊಗಳಿದ ಸಲ್ಮಾನ್ ಖಾನ್

ಗುರುವಾರ, 31 ಅಕ್ಟೋಬರ್ 2019 (10:05 IST)
ಮುಂಬೈ: ಬಿಗ್ ಬಿ ಅಮಿತಾಭ್ ಬಚ್ಚನ್ ಮನೆಯಲ್ಲಿ ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ರೈ ಆಪ್ತೆ ಅರ್ಚನಾ ಸದಾನಂದರನ್ನು ಬೆಂಕಿ ಅನಾಹುತದಿಂದ ಕಾಪಾಡಿದ್ದಕ್ಕೆ ಶಾರುಖ್ ಖಾನ್‍ರನ್ನು ಸಲ್ಮಾನ್ ಖಾನ್ ಹೊಗಳಿದ್ದಾರೆ.


ಅರ್ಚನಾ ಲೆಹಂಗಾಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಾಗ ತಮ್ಮ ಜಾಕೆಟ್ ನಿಂದ ಬೆಂಕಿ ನಂದಿಸಿದ ಶಾರುಖ್ ಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಈ ಘಟನೆಯಲ್ಲಿ ನಿಜವಾಗಿಯೂ ಹೀರೋನಂತೇ ಕಾಪಾಡಿದ ಶಾರುಖ್‍ಗೆ ಸಲ್ಮಾನ್ ಅಭಿನಂದಿಸಿದ್ದಾರೆ.

ಶಾರುಖ್ ಬೆಂಕಿ ನಂದಿಸುವ ಸಿನಿಮಾ ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ಸಲ್ಮಾನ್ ‘ಒಂದು ಜೀವವನ್ನು ಉಳಿಸಲು ಬೆಂಕಿಗೆ ಹಾರಲೂ ತಯಾರಾಗುವವನೇ ನಿಜವಾದ ಹೀರೋ’ ಎಂದು ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ