ದಬಾಂಗ್ 3 ಟ್ರೈಲರ್: ಸಲ್ಮಾನ್ ಖಾನ್ ಕನ್ನಡ ಮಾತಿಗೆ ಪ್ರೇಕ್ಷಕರು ಫಿದಾ
ಗುರುವಾರ, 24 ಅಕ್ಟೋಬರ್ 2019 (10:37 IST)
ಮುಂಬೈ: ದಬಾಂಗ್ 3 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಫೈಟ್ ಗೆ ವೀಕ್ಷಕರು ಪೂರ್ಣ ಅಂಕ ಕೊಟ್ಟಿದ್ದಾರೆ.
ಹಿಂದಿಯಲ್ಲದೆ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಸಲ್ಮಾನ್ ಖಾನ್ ಡಬ್ಬಿಂಗ್ ಮಾಡಿರುವುದು ಕನ್ನಡ ಪ್ರೇಕ್ಷಕರಿಗೂ ಇಷ್ಟವಾಗಿದೆ. ಕಿಚ್ಚ ಸುದೀಪ್ ಎಂದಿನ ಕಂಚಿನ ಕಂಠ ಗಮನ ಸೆಳೆಯುತ್ತಿದೆ.
ಈ ಡಿಸೆಂಬರ್ ಕ್ರಿಸ್ ಮಸ್ ಗೆ ಸಿನಿಮಾ ಬಿಡುಗಡೆಯಾಗುತ್ತಿದೆ. ಟ್ರೈಲರ್ ನಲ್ಲಿ ಸ್ವಲ್ಪ ಕಾಮಿಡಿ, ಭರ್ಜರಿ ಫೈಟಿಂಗ್ ಮತ್ತು ಕೊಂಚ ರೊಮ್ಯಾನ್ಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ.