ಬಿಗ್ ಬಾಸ್ ವೇದಿಕೆಯಲ್ಲಿ ಶಾರುಖ್ ಖಾನ್ ಬಗ್ಗೆ ಸಲ್ಮಾನ್ ಖಾನ್ ಹೇಳಿದ ಸತ್ಯವೇನು?
ಸೋಮವಾರ, 21 ನವೆಂಬರ್ 2016 (14:28 IST)
ಮುಂಬೈ: ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಂದು ಕಾಲದಲ್ಲಿ ಶತ್ರುಗಳಾಗಿದ್ದವರು ಮತ್ತೆ ಮಿತ್ರರಾಗಿದ್ದಾರೆ. ಮಿತ್ರರೆಂದ ಮೇಲೆ ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿರಬೇಕಲ್ವಾ? ಹೀಗಿರುವಾಗ ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಶಾರುಖ್ ಬಗ್ಗೆ ಒಂದು ಸತ್ಯ ಹೇಳಿದ್ದರು. ಅದೇನೆಂದು ಗೊತ್ತಾ?
ಬಿಗ್ ಬಾಸ್ ವೇದಿಕೆಗೆ ಭಾನುವಾರ ಸಲ್ಮಾನ್ ಜತೆ ಚಿಟ್ ಚಾಟ್ ಮಾಡಲು ಡಿಯರ್ ಜಿಂದಗಿ ನಾಯಕಿ ಅಲಿಯಾ ಭಟ್ ಬಂದಿದ್ದರು. ಈ ಸಂದರ್ಭದಲ್ಲಿ ಅಲಿಯಾಗೆ ಶಾರುಖ್ ಮತ್ತು ಸಲ್ಮಾನ್ ಚಿತ್ರ ತೋರಿಸಿ ಒಬ್ಬರನ್ನು ಆರಿಸಿಕೊಳ್ಳುವಂತೆ ಕೇಳಲಾಯಿತು.
ಹೇಳಿ ಕೇಳಿ ಅಲಿಯಾ ಶಾರುಖ್ ಜತೆ ಡಿಯರ್ ಜಿಂದಗಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೀಗಿರುವಾಗ ಶಾರುಖ್ ಹೆಸರು ಹೇಳದೇ ಇದ್ದರೆ ಹೇಗೆ? ಹಾಗಾಗಿ ಅಳೆದು ತೂಗಿ ಶಾರುಖ್ ಹೆಸರು ಹೇಳಿದ್ದಾರೆ. ಆಗ ಸಲ್ಮಾನ್ ಕಾಲೆಳೆದಿದ್ದಕ್ಕೆ ಅಲಿಯಾ ಮತ್ತೆ ಸಲ್ಮಾನ್ ಹೆಸರು ಹೇಳಿದ್ದಾಳೆ. ಆಗ ಸಲ್ಮಾನ್ ಆಕೆಗೆ ಶಾರುಖ್ ಬಗ್ಗೆ ಒಂದು ಸತ್ಯ ಹೇಳಿದ್ದಾರೆ.
“ನೋಡಮ್ಮಾ ಶಾರುಖ್ ಇಂತಹ ವಿಷಯಗಳನ್ನು ಮರೆಯುವುದಿಲ್ಲ. ಆತ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾನೆ. ಆದರೆ ಅವನಿಗಿಂತ ಹೆಚ್ಚು ನನಗೆ ಇಂತಹ ವಿಷಯಗಳು ಬೇಸರ ಮೂಡಿಸುತ್ತದೆ” ಎಂದು ಮಿತ್ರನ ಸ್ವಭಾವ ಹೇಗೆಂದು ವಿವರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ