ನಟ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಇದೀಗ ಬುಲೆಟ್ ಪ್ರೂಫ್‌

Sampriya

ಮಂಗಳವಾರ, 7 ಜನವರಿ 2025 (16:09 IST)
Photo Courtesy X
ನಟ ಸಲ್ಮಾನ್ ಖಾನ್ ಮೇಲೆ ಹಲವು ಕೊಲೆ ಬೆದರಿಕೆ ಕರೆಗಳು ಹಾಗೂ ಮನೆ ಮೇಲೆ ದಾಳಿ ನಡೆದ ಬಳಿಕ ಇದೀಗ ಅವರ ಮನೆಯ ಬಾಲ್ಕನಿಗೆ ಬುಲೆಟ್ ಪ್ರೂಫ್‌ ಗ್ಲಾಸ್ ಅಳವಡಿಸಲಾಗಿದೆ.

ಸಲ್ಮಾನ್ ಖಾನ್‌ ಅವರ ಆಪ್ತ, ಬಾಬಾ ಸಿದ್ದಿಕ್ ಅವರನ್ನು ಮುಂಬೈನಲ್ಲಿ ಗುಂಡಿಕ್ಕಿ ಕೊಲೆ ನಡೆದ ಬಳಿಕ ಸಲ್ಮಾನ್ ಖಾನ್ ಕೂಡಾ ಲಿಸ್ಟ್‌ನಲ್ಲಿರುವುದು ತಿಳಿದುಬಂದಿತ್ತು. ಅದಲ್ಲದೆ ಈ ಹಿಂದೆ ಸಲ್ಮಾನ್ ಖಾನ್ ಮನೆ ಮೇಲೂ ಬೈಕ್‌ನಲ್ಲಿ ಬಂದ ಇಬ್ಬರು ಗುಂಡಿನ ದಾಳಿ ನಡೆಸಿದ್ದರು.

ಅದಲ್ಲದೆ ಸಲ್ಮಾನ್‌ ಖಾನ್ ಹಲವು ಬೆದರಿಕೆ ಸಂದೇಶಗಳು ಬಂದಿದ್ದವು ಈ ಎಲ್ಲ ಘಟನೆಗಳ ಬಳಿಕ ಇದೀಗ ಸಲ್ಮಾನ್ ಖಾನ್ ಮನೆಯ ಬಾಲ್ಕನಿಗೆ ಬುಲೆಟ್ ಪ್ರೂಫ್‌ ಗ್ಲಾಸ್ ಹಾಕಲಾಗಿದೆ.

ಸಿದ್ದಿಕ್ ಸಾವಿನ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ