ಬೇಲ್ ಕ್ಯಾನ್ಸಲ್ ಆಗುವಾಗ ಪವಿತ್ರಾ ಗೌಡ ಮನೆಯಲ್ಲಿದ್ದರೆ, ದರ್ಶನ್ ಎಲ್ಲಿ ಹೋದ್ರು

Krishnaveni K

ಗುರುವಾರ, 14 ಆಗಸ್ಟ್ 2025 (11:43 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಏಳು ಆರೋಪಿಗಳ ಜಾಮೀನು ರದ್ದು ಮಾಡಲಾಗಿದೆ.
ಈ ವೇಳೆ ಪವಿತ್ರಾ ಗೌಡ ಮನೆಯಲ್ಲಿದ್ದರೆ, ದರ್ಶನ್ ಎಲ್ಲಿ ಹೋಗಿದ್ದರು ಗೊತ್ತಾ?


ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಇದರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಇಂದು ಬೇಲ್ ರದ್ದು ಮಾಡಿ ತೀರ್ಪು ಪ್ರಕಟಿಸಿದೆ. ಇದೊಂದು ಬೆಂಚ್ ಮಾರ್ಕ್ ತೀರ್ಪು ಎಂದು ಕೋರ್ಟ್ ಹೇಳಿದೆ.

ಇನ್ನು ಕೋರ್ಟ್ ತೀರ್ಪಿನ ಸಂದರ್ಭದಲ್ಲಿಯೂ ಎ1 ಆರೋಪಿ ಪವಿತ್ರಾ ಗೌಡ ರಾಜರಾಜೇಶ್ವರಿ ನಗರದ ಮನೆಯಲ್ಲಿಯೇ ಇದ್ದರು. ಇದೀಗ ಕಾಮಾಕ್ಷಿ ಪಾಳ್ಯ ಪೊಲೀಸರು ಮನೆಗೆ ಬಂದು ಬೇಲ್ ರದ್ದಾಗಿರುವ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇನ್ನು, ದರ್ಶನ್ ಡೆವಿಲ್ ಸಿನಿಮಾದ ಸಾಂಗ್ ರಿಲೀಸ್ ಗೆ ಪ್ರಮೋಷನ್ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯಕ್ಕೆ ದರ್ಶನ್ ಆರ್ ಆರ್ ನಗರದ ಮನೆಯಲ್ಲಂತೂ ಇಲ್ಲ. ಅವರು ಎಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಯಾರಿಗೂ ಗೊತ್ತಿಲ್ಲ. ಆದರೆ ಅದೇನೇ ಇದ್ದರೂ ಈಗ ಅವರು ಶರಣಾಗಲೇಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ