ದರ್ಶನ್ ಮತ್ತೆ ಯಾವ ಜೈಲಿಗೆ ಹೋಗ್ತಾರೆ ಇಲ್ಲಿದೆ ಮಾಹಿತಿ

Krishnaveni K

ಗುರುವಾರ, 14 ಆಗಸ್ಟ್ 2025 (11:30 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಏಳು ಆರೋಪಿಗಳ ಜಾಮೀನು ರದ್ದು ಮಾಡಲಾಗಿದೆ. ಈಗ ದರ್ಶನ್ ಯಾವ ಜೈಲಿಗೆ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಜಾಮೀನು ಪಡೆದು ಹೊರಬರುವ ಮುನ್ನ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಅದಕ್ಕೆ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದರೆ ಅಲ್ಲಿ ಅವರಿಗೆ ರಾಜಾತಿಥ್ಯ ಸಿಕ್ಕ ಹಿನ್ನಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಇನ್ನು, ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಹೀಗಾಗಿ ದರ್ಶನ್ ರನ್ನು ಬಳ್ಳಾರಿ ಜೈಲಿಗೇ ಕಳುಹಿಸುವ ಸಾಧ್ಯತೆಯಿದೆ. ಇನ್ನು ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿಗೇ ಕಳುಹಿಸುವ ಸಾಧ್ಯತೆಯಿದೆ. ಇಂದು ಸಂಜೆಯೊಳಗಾಗಿ ಪೊಲೀಸರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕೆ ಮೊದಲು ಅವರು ಜಾಮೀನು ರದ್ದು ಆದೇಶ ಪ್ರತಿಯನ್ನು ಪಡೆದು ಓದಿ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಿದ್ದಾರೆ. ವಿಚಾರಣಾಧಿಕಾರಿ ಎಸಿಪಿ ಚಂದನ್ ಜಾಮೀನು ರದ್ದು ಪ್ರತಿಯನ್ನು ಪಡೆದು ವಿಚಾರಣಾಧೀನ ಕೋರ್ಟ್ ಗೆ ನೀಡಲಿದ್ದಾರೆ. ಬಳಿಕ ಅವರನ್ನು ಯಾವ ಜೈಲಿಗೆ ಕಳುಹಿಸಲಾಗುತ್ತದೆ ಎನ್ನುವುದು ಖಚಿತವಾಗಲಿದೆ. ಮೊದಲು ದರ್ಶನ್ ಆಂಡ್ ಗ್ಯಾಂಗ್ ಬಂಧನಕ್ಕೆ ಮತ್ತೆ ಕೋರ್ಟ್ ನಿಂದ ವಾರೆಂಟ್ ಪಡೆಯಬೇಕಾಗುತ್ತದೆ. ಅದಕ್ಕೆ ಮೊದಲು ಶರಣಾಗಲು ಸೂಚನೆ ನೀಡಲಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ