ಬಾಬಾ ಸಿದ್ದಿಕಿ ಇಫ್ತಾರ್ ಕೂಟದಲ್ಲಿ ಸಲ್ಲು-ಲೂಲಿಯಾ ಭಾಗಿಯಾಗ್ತಾರಾ?

ಶನಿವಾರ, 18 ಜೂನ್ 2016 (12:44 IST)
ಮುಸ್ತಿಮರ್ ಪವಿತ್ರ ರಂಜಾನ್ ಮಾಸಾಚರಣೆಯ ಸಮಯದಲ್ಲಿ ಆಯೋಜಿಸುವ ಇಫ್ತಾರ್ ಕೂಟದಲ್ಲಿ ಬಾಲಿವುಡ್ ನಟ ಸಲ್ಮಾಲ್ ಖಾನ್ ತನ್ನ ಗರ್ಲ್‌ಫ್ರೆಂಡ್ ಲೂಲಿಯಾ ಜತೆಗೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಮುಂಬೈನ ಬಾಂದ್ರಾದ ಸಮೀಪದಲ್ಲಿರುವ ಫೈಸ್ಟಾರ್ ಹೊಟೇಲ್‌ನಲ್ಲಿ ಇಫ್ತಾರ್ ಪಾರ್ಟಿಯನ್ನ ಆಯೋಜನೆ ಮಾಡಿದ್ದಾರೆ.


ಈ ಔತಣಕೂಟದಲ್ಲಿ ಲೂಲಿಯಾ ಹಾಗೂ ಸಲ್ಲು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಭಾನುವಾರ ಸಂಜೆ ಔತಣಕೂಟದಲ್ಲಿ ಸಲ್ಮಾನ್ ಸೇರಿದಂತೆ ರಾಜಕೀಯ ನಾಯಕರು, ಉದ್ಯಮಿಗಳು ಸೇರಿದಂತೆ ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳು ಕೂಡ ಭಾಗಿಯಾಗಲಿದ್ದಾರೆ.

ಆದ್ರೆ ಸದ್ಯಕ್ಕಂತು ಬಿಟೌನ್‌ನಲ್ಲಿ ಲೂಲಿಯಾ ಜತೆಗೆ ಸಲ್ಲು ಬರಲಿದ್ದಾರೆ ಎಂದು ಎಲ್ಲರ ಕಣ್ಣು ಅವರಿಬ್ಬರ ಮೇಲೆ ನೆಟ್ಟಿದೆ. 
 
ಈ ಹಿಂದೆ ಸಿದ್ದಿಕಿ ಇಫ್ತಾರ್ ಕೂಟದಲ್ಲಿ ವೈರಿಗಳಾಗಿದ್ದ ಸಲ್ಮಾನ್ ಖಾನ್ ಹಾಗೂ ಶಾರೂಖ್ ಖಾನ್ ಹಸ್ತಲಾಘವ ಮಾಡಿಕೊಂಡು ಅಪ್ಪಿಕೊಂಡು ನೆರೆದಿದ್ದವರನ್ನು ಚಕಿತಗೊಳಿಸಿದ್ದರು. ಆದ್ರೆ ಈ ಬಾರಿ ಸಲ್ಲು ತನ್ನ ಗರ್ಲ್‌ಫ್ರೆಂಡ್ ಲೂಲಿಯಾ ಜತೆಗೆ ಭಾಗಿಯಾಗಲಿದ್ದಾರೆ ಎಂದು ಎಲ್ಲಾ ಕಡೆ ಚರ್ಚೆಗಳಾಗುತ್ತಿವೆ. 

ಇನ್ನೂ ಈ ಹಿಂದೆ ಕೂಡ ಪ್ರೀತಿ ಜಿಂಟಾ ರಿಶಪ್ಶನ್ ವೇಳೆ ಬಾಲಿವುಡ್ ನಟ ಸಲ್ಲು ತನ್ನ ಗರ್ಲ್‌ಫ್ರೆಂಡ್ ಲೂಲಿಯಾ ಅವರನ್ನು ಕರೆದುಕೊಂಡು ಬಂದಿದ್ದರು. ಇದು ಎಲ್ಲಾ ಕಡೆ ಸುದ್ದಿ ಮಾಡಿತ್ತು. ಇದೀಗ ಮತ್ತೆ ಸಲ್ಲು -ಲೂಲಿಯಾ ಜತೆಗೆ ಇಫ್ತಾರ್ ಕೂಟದಲ್ಲಿ ಭಾಗಿಯಾಗ್ತಾರಾ? ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ