ಡಿಸೆಂಬರ್‌ನಲ್ಲಿ ಮದುವೆಯಾಗ್ತಾರಂತೆ ಸಲ್ಮಾನ್ ಖಾನ್?

ಶುಕ್ರವಾರ, 6 ಮೇ 2016 (18:17 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಅಮ್ಮನ ಮಾತು ಕೇಳಿ ಮದುವೆಯಾಗ್ತಾರಂತೆ ಎದು ಹೇಳಲಾಗ್ತಿದೆ. ಕೆಲ ಮೂಲಗಳ ಪ್ರಕಾರ ಸಲ್ಮಾನ್ ತಾಯಿ ಸಲ್ಲು ಅವರನ್ನು ಆದಷ್ಟು ಬೇಗ ಮದುವೆಯಾಗಲು ಬಯಸುತ್ತಿದ್ದಾರೆ ಎನ್ನಲಾಗ್ತಿದೆ. ಆದ್ದರಿಂದ ಸಲ್ಮಾನ್ ಡಿಸೆಂಬರ್ ವೇಳೆಗೆ ಮದುವೆಯಾಗುವ ಸಾಧ್ಯತೆಗಳಿವೆ.
ಆದರೆ ಇದುವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ... ಆದರೆ ಅಮ್ಮನ ಮಾತು ಕೇಳಿ ಸಲ್ಮಾನ್ ಆದಷ್ಟು ಬೇಗ ಗುಡ್ ನ್ಯೂಸ್ ನೀಡುತ್ತಾರೆ ಎಂದು ಹೇಳಲಾಗ್ತಿದೆ. ಆದರೆ ಸಲ್ಮಾನ್ ಜತೆಗೆ ಅದ್ಯಾರು ಬಾಳಸಂಗಾತಿಯಾಗ್ತಾರೆ ಅಂತ ಇದುವರೆಗೂ ತಿಳಿದು ಬಂದಿಲ್ಲ..... 
 
ಆದರೆ ಸಲ್ಮಾನ್ ಪ್ರೋಫೆಶನಲ್ ಜೀವನ ನೋಡಿದ್ರೆ ಸಲ್ಮಾನ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ... ಇನ್ನೂ ಸಲ್ಮಾನ್ ಮುಂಬರುವ ಚಿತ್ರ  ಸುಲ್ತಾನ್ ತೆರೆಗೆ ಬರಲು ಸಜ್ಜಾಗಿದೆ.

ಇನ್ನೂ ಸಲ್ಲು ಅಭಿನಯದ 'ಸುಲ್ತಾನ್' ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ಸಾಕಷ್ಟು ತರಬೇತಿ ಪಡೆಯುತ್ತಿದ್ದಾರಂತೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ. ಈದ್ ಹಬ್ಬದಂದು ಚಿತ್ರ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ