ಸಲ್ಮಾನ್ ಖಾನ್ ಗೆ ಥಮ್ಸ್ ಅಪ್ ಕೊಕ್

ಗುರುವಾರ, 20 ಅಕ್ಟೋಬರ್ 2016 (08:51 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇನ್ನು ಮುಂದೆ ಥಮ್ಸ್ ಅಪ್ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲಾರರು.

ಕಾರಣ ಪ್ರಸಿದ್ಧ ಕೋಕಾ ಕೋಲಾ ಸಂಸ್ಥೆಯೊಂದಿಗೆ ಅವರ ನಾಲ್ಕು ವರ್ಷದ ಗುತ್ತಿಗೆ ಅವಧಿ ಮುಗಿದಿದೆ.  ಆದರೆ ಮತ್ತೆ ನವೀಕರಿಸಿಲ್ಲ. ಅವರ ಜಾಗಕ್ಕೆ ನಟ ರಣವೀರ್ ಸಿಂಗ್ ಅವರನ್ನು ರಾಯಭಾರಿಯಾಗಿ ನೇಮಿಸಲು ಮಾತುಕತೆ ನಡೆಸುತ್ತಿದೆ.

ಹೀಗಾಗಿ ಇನ್ನು ಸಲ್ಲೂ ಭಾಯ್ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಾರರು. ಈ ಬಗ್ಗೆ ಕೋಲಾ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಯುವ ನಟರೊಬ್ಬರನ್ನು ರಾಯಭಾರಿಯಾಗಿಸುವುದು ಇದರ ಹಿಂದಿರುವ ಉದ್ದೇಶ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ