ಬೆಂಗಳೂರು : ಗಂಡ-ಹೆಂಡತಿ ಚಿತ್ರದಲ್ಲಿ ಸಖತ್ ಹಾಟ್ ಅವತಾರದಲ್ಲಿ ನಟಿಸಿದ ನಟಿ ಸಂಜನಾ ಗರ್ಲಾನಿ ಇದೀಗ ತಮ್ಮ ಬೆನ್ನ ಮೇಲೆ ಹಾಕಿಸಿಕೊಂಡ ಟ್ಯಾಟೂ ಮೂಲಕ ಸುದ್ದಿಯಾಗಿದ್ದಾರೆ.
ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಸಂಜನಾ, ದುಬೈನಲ್ಲಿ ನಡೆಯುತ್ತಿರುವ ಸೈಮಾ ಆವಾರ್ಡ್ ವೇಳೆ ಬೆನ್ನು ತೋರಿಸಿ ಫೋಸ್ ನೀಡಿದಾಗ ತಮ್ಮ ಬೆನ್ನಿನ ಮೇಲೆ ಹೆಸರೊಂದನ್ನು ಬರೆಯಿಸಿಕೊಂಡಿರುವುದು ಕಂಡುಬಂದಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.
'ಎ' ಅಕ್ಷರದಿಂದ ಪ್ರಾರಂಭವಾಗುವ ಈ ಹೆಸರು ಯಾರದ್ದೂ ಅನ್ನೋದು ಸ್ಪಷ್ಟವಾಗಿ ಕಾಣಿಸೋದಿಲ್ಲ. ಆದರೆ ಈ ಹೆಸರು ಎರಡು ಹೃದಯಗಳ ಸಿಂಬಾಲ್ ಮೂಲಕ ಕೊನೆಯಾಗಿದೆ. ಇದನ್ನಾ ನೋಡಿದ್ರೆ ಸಂಜನಾ ಲವ್ನಲ್ಲಿ ಬಿದ್ರಾ ಅನ್ನೋ ಅನುಮಾನ ಹಲವರಲ್ಲಿ ಹುಟ್ಟಿಕೊಂಡಿದೆ. ಈ ಬಗ್ಗೆ ಸಂಜನಾಗೆ ಕೇಳಿದ್ರೆ, ಸದ್ಯದಲ್ಲೇ ನಿಮ್ಗೆ ಒಂದು ಗುಡ್ ನ್ಯೂಸ್ ಕೊಡ್ತಿನಿ ವೇಟ್ ಮಾಡಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.