ಹಬ್ಬಗಳಿಗೆ ಫ್ರಿಜ್ ಹಾಗೂ ಟಿವಿಗಳನ್ನು ಖರೀದಿಸಬೇಕೆಂದುಕೊಂಡಿರುವ ಗ್ರಾಹಕರಿಗೊಂದು ಗುಡ್ ನ್ಯೂಸ್
ಸೋಮವಾರ, 17 ಸೆಪ್ಟಂಬರ್ 2018 (13:00 IST)
ಬೆಂಗಳೂರು : ಹಬ್ಬಗಳು ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಗೃಹೋಪಯೋಗಿ ಉಪಕರಣಗ ಳನ್ನು ಖರೀದಿಸಬೇಕು ಎಂದುಕೊಂಡಿದ್ದ ಗ್ರಾಹಕರಿಗೊಂದು ಸಿಹಿಸುದ್ದಿ.
ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿಯುತ್ತಿದ್ದು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭಗಳಲ್ಲಿ ಗೃಹೋಪಯೋಗಿ ಉಪಕರಣಗಳಾದ ಫ್ರಿಜ್ ಹಾಗೂ ಟಿವಿಗಳ ಬೆಲೆ ಏರಿಕೆಯಾಗುತ್ತದೆ ಎಂದು ಗ್ರಾಹಕರು ಚಿಂತೆಪಡುವ ಅಗತ್ಯವಿಲ್ಲ.
ಗೃಹೋಪಯೋಗಿ ಉಪಕರಣಗಳಾದ ಫ್ರಿಜ್ ಹಾಗೂ ಟಿವಿಗಳ ಬೆಲೆ ಏರಿಕೆ ಆಗಿಲ್ಲ. ಸದ್ಯಕ್ಕೆ ಇವುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಕೂಡ ಇಲ್ಲ. ಸತತವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಕಳೆದ ತಿಂಗಳದಲ್ಲಿ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಶೇ. 5ರಷ್ಟು ಹೆಚ್ಚಳ ಮಾಡಲಾಗಿತ್ತು. ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮತ್ತಿತರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದರವನ್ನು ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.