ಮೊದಲ ಬಾರಿಗೆ ಕ್ಯಾಮೆರಾಗೆ ಫೋಸ್ ಕೊಟ್ಟ ಸಂಜು ದಾದಾ

ಶುಕ್ರವಾರ, 20 ಮೇ 2016 (12:33 IST)
ಸಂಜಯ ದತ್ ಅವರ ಯರವಾಡ ಜೈಲಿನಿಂದ ಬಿಡುಗಡೆಗೊಂಡು ತಿಂಗಳುಗಳೇ ಕಳೆದ್ರು ಅವರು ಇದುವೆರೆಗೂ ಯಾವುದೇ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿಲ್ಲ. 
ತಮ್ಮ ಸಿನಿಮಾಗಳ ಬಗ್ಗೆಯೂ ಸಂಜಯ್ ದತ್ ಎಲ್ಲೂ ಮಾತನಾಡಿಲ್ಲ. ಅಭಿಮಾನಿಗಳು ಮತ್ತೆ ನಾವು ಮುನ್ನಭಾಯಿಯನ್ನು ಯಾವಾಗ ನೋಡುತ್ತೇವೆ ಅಂತಾ ಕಾಯುತ್ತಲೇ ಇದ್ದಾರೆ. ಹೀಗಿರುವಾಗಲೇ ಸಂಜಯ್ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ.

 
ಅಂದ್ಹಾಗೆ ಸಂಜಯ್ ದತ್ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಅಂತಾ ತಲೆಗೆ ಹುಳ ಬಿಟ್ಟುಕೊಳ್ಳಬೇಡಿ. ಸಂಜಯ್ ಯಾವುದೇ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿಲ್ಲ. ಜಾಹೀರಾತೊಂದರಲ್ಲಿ ಅಭಿನಯಿಸಿದ್ದಾರೆ.

ಅಂದ್ಹಾಗೆ ಜೈಲಿನಿಂದ ಹೊರ ಬಂದಮೇಲೆ ಸಂಜಯ್ ದತ್ ಅವರು ಇದೇ ಮೊದಲ ಬಾರಿಗೆ ಕ್ಯಾಮರಾ ಮುಂದೆ ನಿಂತಿದ್ದಾರೆ. ಬಟ್ಟೆ ಕಂಪನಿಯೊಂದರ ಜಾಹೀರಾತಿನಲ್ಲಿ ಅವರು ಅಭಿನಯಿಸಿದ್ದಾರೆ,
 
ಇನ್ನು ಸಂಜಯ್ ದತ್ ಸಿನಿಮಾದಲ್ಲಿ ಅಭಿನಯಿಸದೇ ಇರೋದ್ಕೂ ಕಾರಣ ಇದೆ. ಜೈಲಿನಲ್ಲಿ ಇದ್ದ ಕಾರಣ ಸಂಜಯ್ ದತ್ ಅವರುದೇಹದ ಬಗ್ಗೆ ಸರಿಯಾಗಿ ಕೇರ್ ತೆಗೆದುಕೊಂಡಿರಲಿಲ್ಲ.ಆದ್ರೀಗ ರಿಲೀಸ್ ಆಗಿರೋದರಿಂದ ಜಿಮ್ ನಲ್ಲಿ ದೇಹ ದಂಡನೆ ಮಾಡುತ್ತಿದ್ದಾರೆ. ಸರಿಯಾಧ ಫಿಟ್ನೆಸ್ ಕಾಯ್ದುಕೊಂಡ ಬಳಿಕ ಅವರು ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ