ಬಾಲಿವುಡ್ ನಟ ಸಂಜಯ್ ದತ್ ಅವರ ನಿಜಜೀವನವು ಯಾವುದೇ ಬ್ಲಾಕ್‌ಬಸ್ಟರ್ ಚಿತ್ರಕಥೆಗಿಂತ ಕಡಿಮೆಯಿಲ್ಲ. ಮಾದಕವಸ್ತುಗಳ ಚಟ, ವಿವಾದಗಳು, ಜೈಲು ಎಲ್ಲವನ್ನೂ ತಮ್ಮ 56 ವರ್ಷಗಳ ಜೀವನದಲ್ಲಿ ಸಂಜಯ್ ದತ್ ಅನುಭವಿಸಿದ್ದಾರೆ.
ತಮ್ಮ ಕುಟುಂಬಕ್ಕಾಗಿ ತಾವು ಮಾದಕವಸ್ತು ಚಟ ತ್ಯಜಿಸಲಿಲ್ಲ. ತಾವು ಅದರಿಂದ ಹೊರಬರಬೇಕೆಂಬ ಮನೋನಿರ್ಧಾರದಿಂದ ಅದನ್ನು ತ್ಯಜಿಸಿದೆ. ನಾನು ಯುವಜನರಿಗೆ ಹೇಳುವುದೇನೆಂದರೆ, ನಿಮ್ಮ ಜೀವನದಲ್ಲಿ ಕೆಲಸವನ್ನು ಪ್ರೀತಿಸಿ, ಕುಟುಂಬವನ್ನು ಪ್ರೀತಿಸಿದರೆ ಅದು ಕೊಕೇನ್‌ಗಿಂತ ಎಷ್ಟೋ ಶ್ರೇಷ್ಟ ಎಂದರು.