ಲೀಡ್ ರೋಲ್‌ನಲ್ಲಿ ಮಿಂಚಿರುವ ಐಶ್ವರ್ಯ ರೈ ಹಾಗೂ ರಂದೀಪ್ ಅಭಿನಯ ಸಖತ್ ಎಮೋಷನಲ್ ಫೀಲ್ ಮೂಡಿಸುತ್ತದೆ.. ಇನ್ನೂ ಚಿತ್ರದಲ್ಲಿ ಐಶ್ವರ್ಯ ರೈ ಅವರ ನಟನೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.ಇನ್ನೂ ಈ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಅಮಲ್ ಮಲ್ಲಿಕ್ , ಸಾಹಿಲ್ ಪ್ರಿತೇಶ್, ತನಿಶ್ಕಾ ಬೇಚಿ, ಶಶಿ ಮೊದಲಾದವರು...
ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ ಕಥಾ ವಸ್ತು ಅದ್ಭೂತವಾಗಿ ಹೆಣಯಲಾಗಿದೆ. ಅದಕ್ಕಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇನ್ನೂ ಅರ್ಜಿತ್ ಸಿಂಗ್, ತುಲಸಿ ಕುಮಾರ್ ಹಾಗೂ ಸೋನು ನಿಗಂ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ. ಸೋನು ನಿಗಂ ಹಾಗೂ ಅರ್ಜಿತ್ ಧ್ವನಿ ನಿಮ್ಮ ಹೃದಯ ತಟ್ಟದೇ ಇರದು.