ಟ್ರಾಫಿಕ್ ಪೊಲೀಸ್ ವೇಷಧಾರಿಯಲ್ಲಿ ಮನೋಜ್ ಬಾಜ್ಪೇಯಿ

ಬುಧವಾರ, 4 ಮೇ 2016 (20:06 IST)
ನಟ ಮನೋಜ್ ಬಾಜ್ಪೇಯಿ ಇವತ್ತು ಟ್ರಾಫಿಕ್ ವೇಷಧಾರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದರು. 47 ವರ್ಷದ ಮನೋಜ್ ಬಾಜ್ಪೇಯಿ ನೋಡಿದ್ರೆ ನೀವೂ ಕೂಡ ಸೆಲ್ಯೂಟ್ ಹೊಡಿತ್ತೀರಾ ಎನ್ನುವ ಭಾವನೆ ಮೂಡಿಸಿದ್ರು. 
ಮನೋಜ್ ಅವರ ಮುಂಬರುವ ಚಿತ್ರ ಟ್ರಾಫಿಕ್ ಚಿತ್ರದಲ್ಲಿ ಮನೋಜ್ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಇಂದು ಟ್ರಾಫಿಕ್ ಪೊಲೀಸರ ಬಟ್ಟೆ ಧರಿಸಿ ಡ್ಯೂಟಿಯಲ್ಲಿ ಮಿಂಚಿದ್ರು.. ಮುಂಬೈನ ಪ್ರಮುಖ ರಸ್ತೆಯಲ್ಲಿ ಕಾಣಿಸಿಕೊಂಡ ಮನೋಜ್ ಅವರ ಹೊಸ ಅವತಾರವನ್ನು ನೋಡಿದ  ಕೆಲ ಜನರನ್ನು ಸರ್‌ಪ್ರೈಜ್ ನೀಡಿದ್ರು..
 
ಅಂದಹಾಗೆ ಟ್ರಾಫಿಕ್ ಪೊಲೀಸರ ಕೆಲಸದ ಬಗ್ಗೆ ತನ್ನ ಪಾತ್ರದಲ್ಲಿ ಅಳವಡಿಸಿಕೊಳ್ಳಲಿದ್ದಾರೆ ಮನೋಜ್ ಬಾಜ್ಪೇಯಿ. ಟ್ರಾಫಿಕ್ ಪೊಲೀಸರ ಸಂಭಾಷಣೆಯನ್ನು ನೋಡಿ ಕಲಿತಿದ್ದಾರಂತೆ. ಅಲ್ಲದೇ ಟ್ರಾಫಿಕ್ ಪೊಲೀಸ್‌ರ ವೇಷಧಾರಿಯಲ್ಲಿ ಸಾಕಷ್ಟು ಅನುಭವ ನೀಡಿದೆ ಎಂದು ಮನೋಜ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ