ಶಾರುಖ್ ಖಾನ್ ಬಾಲ್ಯ ಕಳೆದಿದ್ದು ಮಂಗಳೂರಿನಲ್ಲಿ, ಕನ್ನಡವೂ ಗೊತ್ತಿತ್ತು
ಶಾರುಖ್ ಖಾನ್ ಹುಟ್ಟಿದ್ದು ದೆಹಲಿಯಲ್ಲಿ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ತಮ್ಮ ಬಾಲ್ಯವನ್ನು ಶಾರುಖ್ ಕಳೆದಿದ್ದು ಕರ್ನಾಟಕದ ಕರಾವಳಿ ಮಂಗಳೂರಿನಲ್ಲಂತೆ. ಇಂತಹದ್ದೊಂದು ಅಚ್ಚರಿಯ ಸಂಗತಿಯನ್ನು ಅವರು 2013 ರಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾ ಪ್ರಮೋಷನ್ ವೇಳೆ ಹೇಳಿಕೊಂಡಿದ್ದರು. ಆ ವಿಚಾರವೀಗ ಮತ್ತೆ ವೈರಲ್ ಆಗಿದೆ.
ತಾಯಿಗೆ ಕನ್ನಡ ಸೇರಿ ನಾಲ್ಕು ಭಾಷೆಗಳು ಬರುತ್ತಿದ್ದವು. ಈಗಲೂ ಶಾರುಖ್ ಬಳಿ ಮಂಗಳೂರಿನಲ್ಲಿ ಬಾಲ್ಯದಲ್ಲಿದ್ದ ಕೆಲವು ಫೋಟೋಗಳಿವೆಯಂತೆ. ಅದು ಬಿಟ್ಟರೆ ಮಂಗಳೂರಿನ ಬಗ್ಗೆ ಬೇರೆ ನೆನಪುಗಳಿಲ್ಲ. ಆದರೆ ಕರ್ನಾಟಕದೊಂದಿಗೆ ತನಗೆ ಕನೆಕ್ಷನ್ ಇದೆ ಎಂದು ಶಾರುಖ್ ಹೇಳಿದ್ದರು.