ಶಾರೂಖ್ ಖಾನ್ ತಮ್ಮ ರಾಯಿಸ್ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಯಿಸ್ ಚಿತ್ರದಲ್ಲಿ ಶಾರೂಖ್ ಖಾನ್ ಅಭಿನಯಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತು.. ಇನ್ನೂ ಹೃತಿಕ್ ರೋಷನ್ ಅಭಿನಯದ 'ಕಾಬಿಲ್' ಚಿತ್ರವು ಕೂಡ ತೆರೆ ಮೇಲೆ ಬರುತ್ತಲಿದೆ. ಈ ಹಿನ್ನೆಲೆಯಲ್ಲಿ ಕಿಂಗ್ ಖಾನ್ ಶಾರೂಖ್ ಹೃತಿಕ್ ಮನೆಗೆ ತೆರಳಿ ಅಲ್ಲಿ ರಾಕೇಶ್ ರೋಷನ್ ಹಾಗೂ ಹೃತಿಕ್ ರೋಷನ್ ಜತೆಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಖುದ್ದು ಶಾರೂಖ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಬಹುದಿನದ ಬಳಿಕ ಗೆಳೆಯ,ಅತ್ಯುತ್ತಮ ಗುರು, ಹಾಗೂ ಕುಟುಂಬದ ಸದಸ್ಯನಂತಿರುವ ಮಿಸ್ಟರ್ ರಾಕೇಶ್ ರೋಷನ್‌ರನ್ನು ಭೇಟಿ ಮಾಡಿದೆ. ಇಲ್ಲಿ ತುಂಬಾ ಕೆಲಸ ಮಾಡುವುದು ಮುಖ್ಯವಾಗುವುದಿಲ್ಲ, ಸರಿಯಾದ ಆಯ್ಕೆ ಮಾತ್ರ ಮುಖ್ಯವಾಗುತ್ತದೆ ಎಂದು ಎಸ್‌ಆರ್‌ಕೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.