ಪಿಎಂ ನರೇಂದ್ರ ಮೋದಿ ಪಾರ್ಟಿಗೆ ಆಗಮಿಸಲಿದ್ದಾರಾ ಶಾರೂಖ್,ಸಲ್ಮಾನ್, ಅಮಿರ್?

ಶನಿವಾರ, 7 ಮೇ 2016 (14:50 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಮೇ26ಕ್ಕೆ ತನ್ನ ಎರಡು ವರ್ಷಗಳ ಅಧಿಕಾರವಧಿ ಸಂಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾರ್ಟಿ ಆಯೋಜನೆ ಮಾಡಲಿದ್ದಾರೆ.. ಆದ್ರೆ ಕುತೂಹಲ ವಿಷ್ಯ ಅಂದ್ರೆ 26ರಂದು ಮೋದಿ ಆಯೋಜಿರುವ ಪಾರ್ಟಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮಿರ್ ಖಾನ್ ಭಾಗಿಯಾಗಲಿದ್ದಾರಂತೆ..

ಭಾರತೀಯ ಜನತಾ ಪಾರ್ಟಿ ತನ್ನ ಎರಡು ವರ್ಷಗಳ ಅಧಿಕಾರವಧಿ ಮುಕ್ತಾಯಗೊಳಿಸಿರುವ ಖುಷಿಯಲ್ಲಿದೆ ಪಕ್ಷ.. ಹಾಗಾಗಿ ಬಿಜೆಪಿ ತನ್ನ ತಮ್ಮ ಅಧಿಕಾರವಧಿಯ ಯಶಸ್ಸನ್ನು ಆಚರಿಸಲಿದೆ. ಕೆಲ ಮೂಲಗಳ ಪ್ರಕಾರ,  ಮೋದಿ ಸಮಾರಂಭದಲ್ಲಿ ಬಾಲಿವುಡ್‌ನ ಖಾನ್‌ಗಳ ಆಗಮನ ಆಗಲಿದೆ ಎಂದು ಹೇಳಲಾಗ್ತಿದೆ. 
 
ಇನ್ನೂ ಸಮಾರಂಭವನ್ನು ದೆಹಲಿಯ ಇಂಡಿಯಾ ಗೇಟ್ ಬಳಿ ಆಯೋಜಿಸಲಾಗಿದೆ. ಅಂದಹಾಗೆ ಶಾರೂಖ್, ಸಲ್ಮಾನ್ ಹಾಗೂ ಶಾರೂಖ್ ಮೂವರು ನಟರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಲೋಸ್ ಆಗಿದ್ದಾರೆ..

ಈ ಹಿನ್ನಲೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮೂವರ ಹೆಸರನ್ನು ನೀಡಿದೆಯಂತೆ. ಆದರೆ ಇದುವರೆಗೂ ಅಧಿಕೃತ ಹಾಜರಾತಿ ಬಗ್ಗೆ ಧೃಡಪಟ್ಟಿಲ್ಲ.. 
 
ಇನ್ನೂ ಕೆಲ ಮೂಲಗಳ ಪ್ರಕಾರ ಬಾಲಿವುಡ್‌ನ ಹಲವು ದಿಗ್ಗಜರು ಹಾಜರಾಗಲಿದ್ದಾರಂತೆ.. ಮಾಧುರಿ ಧೀಕ್ಷಿತ್, ಕಾಜೋಲ್, ಅಜಯ್ ದೇವಗನ್, ಅನಿಲ್ ಕಪೂರ್, ಜೂಹಿ ಚಾವ್ಲಾ ಮುಂತಾದವರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ