ಯಶ್ ಬಾಲಿವುಡ್ ನ ನಂ.1 ಸ್ಟಾರ್ ಎಂದ ಶಾಹಿದ್ ಕಪೂರ್

ಗುರುವಾರ, 25 ಆಗಸ್ಟ್ 2022 (16:40 IST)
ಮುಂಬೈ: ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಬಾಲಿವುಡ್ ಮಂದಿಗೂ ಯಶ್ ಮೇಲೆ ವಿಶೇಷ ಅಭಿಮಾನವಿದೆ.

ಇದೀಗ ಕಾಫಿ ವಿತ್ ಕರಣ್ ಶೋನಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ರಾಕಿ ಭಾಯಿ ಯಶ್ ಬಾಲಿವುಡ್ ನ ನಂ.1 ಸ್ಟಾರ್ ಎಂದು ಬಿರುದು ನೀಡಿದ್ದಾರೆ.

ನಿರೂಪಕ ಕರಣ್ ಜೋಹರ್ ನಿಮ್ಮ ಪ್ರಕಾರ ಬಾಲಿವುಡ್ ನ ನಂ.1 ಸ್ಟಾರ್ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಶಾಹಿದ್ ರಾಕಿ ಭಾಯಿ ಎನ್ನುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ