ಟ್ರಾಫಿಕ್‌ಗೆ ಮರಳಿದ ನಟ ಶಾರುಖ್ ಖಾನ್

ಗುರುವಾರ, 28 ಏಪ್ರಿಲ್ 2016 (12:01 IST)
ನಟ ಶಾರುಖ್ ಖಾನ್ ಅವರ ಸಿನಿಮಾಗಳು ಈಗೀಗ ಅವರಿಗೆ ಉತ್ತಮ ಯಶಸ್ಸು ತಂದುಕೊಡುತ್ತಿಲ್ಲ. ದಿಲ್ ವಾಲೇ ಸಿನಿಮಾ ಕೂಡ ಶಾರುಖ್ ಪಾಲಿಗೆ ನಿರೀಕ್ಷಿಸಿದ ಸಕ್ಸಸ್ ಸಿಗಲಿಲ್ಲ. ಫ್ಯಾನ್ ನನ್ನು ಕೂಡ ಪ್ರೇಕ್ಷಕರು ಅಪ್ಪಿಕೊಳ್ಳಲಿಲ್ಲ. ಹೀಗಿರುವಾಗಲೇ ಶಾರುಖ್ ಖಾನ್ ಇದೀಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಹೌದು.. ಮನೋಜ್ ಬಾಜಪೇಯಿ ನಿರ್ದೇಶನದ ಟ್ರಾಫಿಕ್ ಸಿನಿಮಾದಲ್ಲಿ ಕಿಂಗ್ ಖಾನ್ ಅಭಿನಯಿಸಿದ್ದಾರೆ.ಟ್ರಾಫಿಕ್ ಸಿನಿಮಾ ಮಲೆಯಾಳಂನ ಟ್ರಾಫಿಕ್ ಸಿನಿಮಾದ ರಿಮೇಕ್. 2011ರಲ್ಲಿ ಮಲೆಯಾಳಂನಲ್ಲಿ ತೆರೆ ಕಂಡ ಈ ಸಿನಿಮಾವನ್ನು ನಿರ್ದೇಶಕ ರಾಜೇಶ್ ಪಿಳ್ಳೈ ಅವರು ನಿರ್ದೇಶನ ಮಾಡಿದ್ದರು.

ಇದನ್ನು ಬಾಲಿವುಡ್ ನಲ್ಲಿ ರಿಮೇಕ್ ಮಾಡಿದ್ದಾರೆ. ಇನ್ನು ಈ ಸಿನಿಮಾ ಬಾಲಿವುಡ್ ನಲ್ಲಿ ಉತ್ತಮ ಯಶಸ್ಸು ಕಾಣುತ್ತೆ ಅಂತಾ ಅವರು ಹೇಳಿದ್ದಾರೆ.ಇನ್ನು ಈ ಸಿನಿಮಾದಲ್ಲಿ ಮನೋಜ್ ಬಾಜಪೇಯಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮನೋಜ್ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಅಂತಾ ಶಾರುಖ್ ಹೇಳಿದ್ದಾರೆ.

 ಇನ್ನು ಮೊನ್ನೆ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಸಲ್ಮಾನ್ ಖಾನ್ ಅವರು ಭಾಗವಹಿಸಿದ್ದರು. ಸಿನಿಮಾ ವೀಕ್ಷಿಸಿದ ಸಲ್ಮಾನ್ ಖಾನ್ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲೂ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ