ಶಾರುಖ್ ಐ ಮಿಸ್ ಹರ್ ಎಂದಿದ್ದು ಯಾರಿಗೆ?

ಬುಧವಾರ, 19 ಅಕ್ಟೋಬರ್ 2016 (09:24 IST)
ಮುಂಬೈ: ಸಾಧಾರಣವಾಗಿ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಎಂದರೆ, ಅಭಿಮಾನಿಗಳು ಮಾತ್ರವಲ್ಲ, ಸಹನಟಿಯರೂ ಇಷ್ಟಪಡುತ್ತಾರೆ. ಆದರೆ ಈ ಬಾರಿ ಸ್ವತಃ ಶಾರುಖ್ ತಮ್ಮ ಸಹನಟಿಯೊಬ್ಬರಿಗೆ ಮಿಸ್ ಯೂ ಎಂದಿದ್ದಾರೆ!
ಅದ್ಯಾರು ಗೊತ್ತಾ? ಕ್ರಿಕೆಟಿಗ ವಿರಾಟ್ ಕೊಹ್ಲಿಯ ಗೆಳತಿ ಅನುಷ್ಕಾ ಶರ್ಮಾಗೆ. ವಿಷಯ ಇಷ್ಟೇ.

ಇತ್ತೀಚೆಗಷ್ಟೇ ಶಾರುಖ್ ತಮ್ಮ “ರಬ್ ನೇ ಬನಾ ದಿ ಜೋಡಿ” ನಾಯಕಿ ಜತೆಗೆ ‘ದಿ ರಿಂಗ್’ ಎಂಬ ಹೊಸ ಚಿತ್ರ ಮಾಡುತ್ತಿದ್ದಾರೆ. ಇದರಲ್ಲಿ ಅನುಷ್ಕಾ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಚಿತ್ರ ತಂಡಕ್ಕೆ ಗುಡ್ ಬೈ ಹೇಳಿ ಮನೆ ಕಡೆ ಹೊರಟಿದ್ದಾರೆ.

ಹೀಗಾಗಿ ಶಾರುಖ್ ತಮ್ಮ ಮೆಚ್ಚಿನ ಸಹನಟಿಗೆ ಟ್ವಿಟರ್ ಖಾತೆಯಲ್ಲಿ “ಮಿಸ್ ಯೂ ಅನುಷ್ಕಾ..” ಎಂದು ಟ್ವೀಟ್ ಮಾಡಿದ್ದಾರೆ. ಇದು ಇವರಿಬ್ಬರು ಜತೆಯಾಗಿ ನಟಿಸುತ್ತಿರುವ ಮೂರನೇ ಚಿತ್ರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ