ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ದೂರವಾಗುತ್ತಿದ್ದಾರೆಂಬ ಸುದ್ದಿಗೆ ಬ್ರೇಕ್ ಹಾಕಿದ ಕುದ್ರಾ

ಶುಕ್ರವಾರ, 3 ಜೂನ್ 2016 (10:21 IST)
ಬಾಲಿವುಡ್ ನಲ್ಲಿ ಅದ್ಯಾಕೋ ಗೊತ್ತಿಲ್ಲ ತಾರಾ ದಂಪತಿಗಳು ಪರಸ್ಪರ ದೂರವಾಗುತ್ತಿರುವ ಸುದ್ದಿಗಳೇ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಅನೇಕ ತಾರಾ ದಂಪತಿಗಳು, ಪ್ರೇಮಿಗಳು ಪರಸ್ಪರ ದೂರವಾಗಿರೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಹೀಗಿರುವಾಗಲೇ ಬಾಲಿವುಡ್ ಅಂಗಳದಲ್ಲಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರು ದೂರವಾಗುತ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬಂದಿತ್ತು. ಇದಕ್ಕೆ ರಾಜ್ ಕುಂದ್ರಾ ಅವರೇ ಬ್ರೇಕ್ ಹಾಕಿದ್ದಾರೆ.
 ಕಳೆದ ಕೆಲವು ದಿನಗಳಿಂದ ರಾಜ್ ಕುಂದ್ರಾ ಅವರು ಹಾಗೂ ಶಿಲ್ಪಾ ಶೆಟ್ಟಿ ಅವರ ನಡುವೆ  ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದ್ದವು. ರಾಜ್ ಕುಂದ್ರಾ ಅವರು ಶಿಳ್ಪಾ ಶೆಟ್ಟಿ ಅವರ ಮನೆಯಿಂದ ದೂರವಾಗಿ ಬೇರೆಯೇ ವಾಸವಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು.ಅಲ್ಲದೇ ರಾಜ್ ಕುಂದ್ರಾ ಅವರು ತಮ್ಮ ಆಫೀಸ್ ಗೆ ಶಿಫ್ಟ್ ಆಗಿದ್ದಾರೆ ಅಂತಾ ಹೇಳಲಾಗುತ್ತಿತ್ತು.
 
ಆದ್ರೆ ಇದೀಗ ರಾಜ್ ಕುಂದ್ರಾ ಅವರು ಈಗ ಟ್ವೀಟ್ ಮಾಡಿದ್ದು ಇದೆಲ್ಲಾ ಸುಳ್ಳು ಅಂತಾ ಹೇಳಿದ್ದಾರೆ. ನಾನು ಪ್ರತಿದಿನ ಆಫೀಸ್ ನಿಂದ ಮನೆಗೆ ಬರೋವಾಗ ಮಧ್ಯರಾತ್ರಿ 1-30 ಆಗುತ್ತೆ. ಅದನ್ನೇ ಇಟ್ಟುಕೊಂಡು ಕೆಲವರು ನಾವಿಬ್ಬರು ದೂರವಾಗುತ್ತಿದ್ದೇವೆ ಅನ್ನೋ ಸುದ್ದಿಯನ್ನು ಹಬ್ಬಿಸಿದ್ದಾರೆ ಅಂತಾ ರಾಜ್ ಕುಂದ್ರಾ ಅವರು ಹೇಳಿದ್ದಾರೆ.
 
ಸದ್ಯ ರಾಜ್ ಕುಂದ್ರಾ ಅವರೇ  ಸುದ್ದಿಗೆ ಬ್ರೇಕ್ ಹಾಕಿರೋದರಿಂದ ಬಾಲಿವುಡ್ ಮಂದಿ ತಣ್ಣಗಾಗಿದ್ದಾರೆ. ಆದ್ರೆ ಬಾಲಿವುಡ್ ನಲ್ಲಿ ಈ ರೀತಿ ಸಾಲು ಸಾಲು ಬ್ರೇಕ್ ಅಪ್ ಗಳ ಸುದ್ದಿಯೇಕೆ ಕೇಳಿ ಬರುತ್ತಿದೆ ಅಂತಾ ಅಭಿಮಾನಿಗಳು ಮಾತ್ರ ತಲೆಕೆಡಿಸಿಕೊಂಡಿದ್ದಾರೆ.

ಈಗಾಗಲೇ ಕತ್ರೀನಾ ಕೈಫ್, ರಣ್ ಬೀರ್ ಕಪೂರ್, ಸುಶಾಂತ್ ಸಿಂಗ್ ಅಂಕಿತಾ ಲೋಖಂಡೆ, ಅರ್ಬಾಜ್ ಖಾನ್ ಮಲ್ಲಿಕಾ ಅರೋರ ಅವರ ಬ್ರೇಕ್ ಅಫ್ ಸುದ್ದಿಗಳಿಂದ ಬೇಸತ್ತು ಹೋಗಿರುವ ಬಾಲಿವುಡ್ ಸಿನಿ ರಸಿಕರು ಇದ್ಯಾಕೆ ಹೀಗಾಗುತ್ತಿದೆ ಅಂತಾ ತಲೆಕೆಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ