ಮನೆಗೆ ಬಂದ ರಾಜ್ ಕುಂದ್ರಾ ಮೇಲೆ ಕೆಂಡ ಕಾರಿದ ಶಿಲ್ಪಾ ಶೆಟ್ಟಿ?!
ಸೋಮವಾರ, 26 ಜುಲೈ 2021 (10:51 IST)
ಮುಂಬೈ: ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾರನ್ನು ಪೊಲೀಸರು ಹೆಚ್ಚಿನ ತನಿಖೆಗೆಂದು ಜುಹುವಿನಲ್ಲಿರುವ ಅವರ ಬಂಗಲೆಗೆ ಕರೆತಂದಿದ್ದರು.
ಈ ವೇಳೆ ರಾಜ್ ಕುಂದ್ರಾ ಮತ್ತು ಪತ್ನಿ ಶಿಲ್ಪಾ ಶೆಟ್ಟಿ ಮಾತಿನ ಚಕಮಕಿಯಾಗಿತ್ತು ಎನ್ನಲಾಗಿದೆ. ಪೊಲೀಸರ ಮುಂದೆಯೇ ಶಿಲ್ಪಾ ತಾಳ್ಮೆ ಕಳೆದುಕೊಂಡು ರಾಜ್ ಮೇಲೆ ಕೂಗಾಡಿದ್ದರು ಎಂದು ವರದಿಯಾಗಿದೆ.
ಪೊಲೀಸರು ಈ ವೇಳೆ ಶಿಲ್ಪಾರನ್ನೂ ವಿಚಾರಣೆಗೊಳಪಡಿಸಿದ್ದರು. ಆದರೆ ಶಿಲ್ಪಾ ಈ ಕಂಪನಿಯ ವ್ಯವಹಾರಕ್ಕೂ ತನಗೂ ಸಂಬಂಧವಿಲ್ಲ ಎಂದಿದ್ದರು ಎನ್ನಲಾಗಿದೆ.