ಪುನೀತ್ ರಾಜ್ ಕುಮಾರ್ ಅಭಿನಯ ದೊಡ್ಮನೆ ಹುಡುಗ ಸಿನಿಮಾ ನಾನಾ ಕಾರಣಕ್ಕೆ ಸೌಂಡ್ ಮಾಡುತ್ತಲೇ ಇದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಮೊನ್ನೆ ಮೊನ್ನೆ ತಾನೇ ಢಿಪರೆಂಟ್ ಆಗಿ ಹಾಡಿನ ಚಿತ್ರೀಕರಣ ಮಾಡಿ ಸೌಂಡ್ ಮಾಡಿದ್ದ ಸಿನಿಮಾ ತಂಡ ಇದೀಗ ಮತ್ತೆ ಸುದ್ದಿಗೆ ಆಹಾರವಾಗಿದೆ.
ಅಂದ್ಹಾಗೆ ಈ ಬಾರಿ ದೊಡ್ಮನೆ ಹುಡುಗ ಸುದ್ದಿಯಾಗಿರೋದು ನಟ ಶಿವರಾಜ್ ಕುಮಾರ್ ಅವರಿಂದಾಗಿ.ಶಿವಣ್ಣ ಇದೀಗ ದೊಡ್ಡ ಮನೆ ಸಿನಿಮಾ ತಂಡ ಸೇರಿದ್ದಾರೆ. ಹಾಗಂಥ ಶಿವಣ್ಣ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಾ ಅಂತಾ ಯೋಚಿಸಬೇಡಿ. ಶಿವಣ್ಣ ಸಿನಿಮಾಕ್ಕೆ ತಮ್ಮ ಕಂಠ ನೀಡಿದ್ದಾರೆ.
ದೊಡ್ಮನೆ ಹುಡ್ಗ ಚಿತ್ರಕ್ಕೆ ಶಿವರಾಜ್‌ಕುಮಾರ್ ಹಿನ್ನೆಲೆ ಧ್ವನಿ ಕೊಡ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಪಾಲಿಗೆ ಇದೊಂದು ವಿಭಿನ್ನವಾದ ಪ್ರಯತ್ನವಾಗಿರೋದರಿಂದ ಇದು ಹೇಗಿರುತ್ತೆ ಅನ್ನೋ ಕುತೂಹಲವಿದೆಯಂತೆ.ಆದ್ರೆ ಈ ಕುತೂಹಲಕ್ಕೆ ಸಿನಿಮಾ ರಿಲೀಸ್ ಆದ ಬಳಿಕವೇ ಉತ್ತರ ಸಿಗಬೇಕಿದೆ
ಇನ್ನು ಸ್ಯಾಂಡಲ್ ವುಡ್ ನಲ್ಲಿ ಒಬ್ಬ ನಟ ನಟಿಯ ಸಿನಿಮಾಕ್ಕೆ ಬೇರೊಬ್ಬ ನಟ ಅಥವಾ ನಟಿ ಧ್ವನಿ ನೀಡೋದು ಹೊಸದೇನಲ್ಲ. ನಟ ಸುದೀಪ್ , ಉಪೇಂದ್ರ, ದರ್ಶನ್, ಹೀಗೆ ಅನೇಕರು ಬೇರೆ ನಟರ ಸಿನಿಮಾಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಇದೀಗ ತನ್ನ ಸಹೋದರನ ಸಿನಿಮಾಕ್ಕೆ ಶಿವಣ್ಣ ಧ್ವನಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ