Ravana Cinema: ರಾವಣನ ಪತ್ನಿಯಾಗಿ ಯಶ್‌ಗೆ ಜೋಡಿಯಾದ ಕಾಜಲ್ ಅಗರ್ವಾಲ್‌

Sampriya

ಶುಕ್ರವಾರ, 16 ಮೇ 2025 (16:47 IST)
Photo Credit X
ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಸಿಕಂದರ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಕಾಜಲ್ ಅಗರ್ವಾಲ್‌ಗೆ ಇದೀಗ ಬಿಗ್ ಆಫರ್‌ವೊಂದು ಅರಸಿ ಬಂದಿದೆ.

ನಿತೇಶ್ ತಿವಾರಿಯವರ ರಾಮಾಯಣದ ಬಹು ನಿರೀಕ್ಷಿತ ಸಿನಿಮೀಯ ರೂಪಾಂತರದಲ್ಲಿ ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಿಂದಿನ ವರದಿಗಳ ಪ್ರಕಾರ ಮಂಡೋದರಿ ಪಾತ್ರಕ್ಕೆ ನಟಿ ಸಾಕ್ಷಿ ತನ್ವಾರ್ ವರು ಬನ್ಣ ಹಚ್ಚಲಿದ್ದಾರೆ ಎನ್ನಲಾಗಿತ್ತು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಕಾಜಲ್ ಅವರು ಈ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

ಒಂದು ಮೂಲದ ಪ್ರಕಾರ, ಕಾಜಲ್ ಇತ್ತೀಚೆಗೆ ಲುಕ್ ಟೆಸ್ಟ್‌ಗೆ ಒಳಗಾಗಿದ್ದಾರೆ ಮತ್ತು ಈಗಾಗಲೇ ಅವರ ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ಕಾಜಲ್ ಕಳೆದ ವಾರ ತನ್ನ ಲುಕ್ ಟೆಸ್ಟ್ ಮಾಡಿದ್ದಾಳೆ ಮತ್ತು ಯಶ್ ಎದುರು ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರೆ.

ರಾಮಾಯಣದಲ್ಲಿ ಮಂಡೋದರಿಯ ಪಾತ್ರವು ನಂಬಲಾಗದಷ್ಟು ನಿರ್ಣಾಯಕವಾಗಿದೆ. ಆದ್ದರಿಂದ, ಯಶ್‌ ಹೆಂಡ್ತಿ ಪಾತ್ರದಲ್ಲಿ ಕಾಜಲ್ ಅಭಿನಯಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ