ಶ್ರದ್ಧಾ ಆರ್ಯ ಬಿಕಿನಿಯಲ್ಲಿ ಬೊಂಬಾಟ್ ದರ್ಶನ!

ಶುಕ್ರವಾರ, 13 ಜನವರಿ 2017 (14:37 IST)
ಊರಿಗೆ ಬಂದವಳು ನೀರಿಗೆ ಬರೋದಿಲ್ವಾ ಅನ್ನೋ ತರಹ ಬೆಳ್ಳಿಪರದೆಗೆ ಬಂದವರು ಬಿಕಿನಿ ತೊಡಲೇಬೇಕು. ಈಗೀಗಂತೂ ಬಿಕಿನಿ ತೊಡದ ಬೆಡಗಿಯೇ ಇಲ್ಲ ಎಂಬಂತಾಗಿದೆ. ಇದೀಗ ದೆಹಲಿ ಸುಂದರಿ ಶ್ರದ್ಧಾ ಆರ್ಯ ಬಿಕಿನಿಯಲ್ಲಿ ಕಂಗೊಳಿಸಿದ್ದಾರೆ.
 
ಈ ಬೆಡಗಿ ದಕ್ಷಿಣದ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಕಪ್ಪು ಬಿಕಿನಿ ತೊಟ್ಟು ತಮ್ಮ ವೈಯಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿರುವ ಶ್ರದ್ಧಾ, ಬೀಚ್‌ನಲ್ಲಿ ಹಾಯಾಗಿ ರಿಲ್ಯಾಕ್ಸ್ ಆಗುವ ಭಂಗಿಯ ಫೋಟೋ ಹಾಕಿದ್ದಾರೆ.
 
ಕೇವಲ ಬೆಳ್ಳಿಪರದೆಯಲ್ಲಷ್ಟೇ ಅಲ್ಲ ಕಿರುತೆರೆಯಲ್ಲೂ ಜನಪ್ರಿಯ ಶ್ರದ್ಧಾ. ಮಜಾಕ್ ಮಜಾಕ್ ಮೆ ಎಂಬ ಕಾಮಿಡಿ ಶೋ ಸಹ ನಡೆಸಿಕೊಟ್ಟಿದ್ದರು.  ಆ ಕಾರ್ಯಕ್ರಮಕ್ಕೆ ಹರ್ಭಜನ್ ಸಿಂಗ್ ಮತ್ತು ಶೋಯಬ್ ಅಕ್ತರ್ ತೀರ್ಪುಗಾರರಾಗಿದ್ದರು. ಒಟ್ಟಾರೆ ಈಗ ಬಿಕಿನಿಯಲ್ಲಿ ಎಲ್ಲರ ಗಮನಸೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ